www.gurufront.com


ತೀಯಾ ಸಮಾಜ ಮುಂಬಯಿ ಸಂಸ್ಥೆಯ ೮೧ನೇಯ ವಾರ್ಷಿಕ ಮಹಾಸಭೆ ಹಾಗೂ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವು ಅಕ್ಟೊಬರ್ ೨೦೨೫ರಂದು ಸಾಯಂಕಾಲ ೪.೦೦ ಘಂಟೆಗೆ ಸರಿಯಾಗಿ ಸಂಘದ ಅಧ್ಯಕ್ಷರಾದ ಕೃಷ ಎನ್. ಉಚ್ಚಿಲ್ ಅವರ ಅಧ್ಯಕ್ಷತೆಯಲ್ಲಿ ಪಿ. ಬಿ. ದೋಷಿ ಕನ್ಯಾಶಾಲಾ ಆಡಿಟೋರಿಯಂ, ೫ನೇಯ ಮಹಡಿ, ಕಾಮಾಲೇನ್, ಘಾಟ್‌ಕೋಪರ್ ಪಶ್ಚಿಮ, ಮುಂಬಯಿ ಇಲ್ಲಿ ಜರಗಿತು.
ವೇದಿಕೆಯಲ್ಲಿ ವಿಶ್ವಸ್ಥ ಕಾರ್ಯಾಧ್ಯಕ್ಷರಾದ ಡಾ. ದಯಾನಂದ ಕುಂಬ್ಳ, ವಿಶ್ವಸ್ಥ ಕಾರ್ಯದರ್ಶಿಗಳಾದ ಶಂಕರ್ ಸಾಲ್ಯಾನ್, ಅಪ್ಪುಂಜಿ ಬಂಗೇರ, ಬಾಬು ಟಿ. ಬಂಗೇರ, ಜಯ ಸುವರ್ಣ ಉಪಾಧ್ಯಕ್ಷರಾದ ರಾಜೆಂದ್ರಕುಮಾರ್, ಗೌ. ಪ್ರಧಾನ ಕಾರ್ಯದರ್ಶಿ ಬಾಬು ಬೆಳ್ಚಡ, ಗೌ. ಕೋಶಾಧಿಕಾರಿ ಅಶ್ವಿನ್ ಬಂಗೇರ, ಮುಖವಾಣಿ ಸಂಪಾದಕ ವಿವೇಕ್ ಚಂದ್ರಶೇಖರ್, ಆರೋಗ್ಯ ನಿಧಿ ಕಾರ್ಯಾಧ್ಯಕ್ಷ ಕೇಶವ ಸುವರ್ಣ ಹಾಗೂ ಮಹಿಳಾ ಕಾರ್ಯಾಧ್ಯಕ್ಷೆ ಆಶಾಲತಾ ಕೆ. ಉಳ್ಳಾಲ್ ಹಾಗೂ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಬೆಳ್ಚಡ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಮಹಿಳಾ ಕಾರ್ಯಧ್ಯಕ್ಷೆ ಆಶಾ ಲತಾ ಉಳ್ಳಾಲ್ ಪ್ರಾರ್ಥನೆ ನೆರವೇರಿಸಿದರು.


ವರದಿ ವಷದ ಮಾಹಾಸಭೆಯ ವರದಿ, ಲೆಕ್ಕಪತ್ರ ಮಂಡಣೆ ಮತ್ತು ಮಂಜೂರು ಮಾಡಲಾಯಿತು. ಆಂತರಿಕ ಲೆಕ್ಕಪರಿಶೋಧಕರಾಗಿ ಗಂಗಾಧರ್ ಕುಂಬ್ಳ ಹಾಗೂ ಲೆಕ್ಕ ಪರಿಶೋಧಕರಾಗಿ ಸಿಎ.ರಾವ್ ಆಂಡ್ ಅಶೋಕ್ ಅವರನ್ನು ಪುನರ್ ನೇಮಕ ಮಾಡಲಾಯಿತು.
ಪ್ರತಿಭಾ ಪುರಸ್ಕಾರಕ್ಕೆ ಅಪೇಕ್ಷಿತ ಪ್ರತಿಭೆಗಳಾದ ಕ್ರಿತಾರ್ಥ್ ಅರುಣಕುಮಾರ್ ಬೆಳ್ಚಡ, ವೃತಿಕಾ ರಂಜಿತ್ ಬಂಗೇರ, ಷ ದಾಮೋದರ್ ಬೆಳ್ಚಡ, ಪ್ರತಮೇಶ್ ಬಿ. ಕರ್ಕೇರ, ಮಹೇಶ್ ಬೆಳ್ಚಡ, ಗೀತಿಕಾ ಬಂಗೇರ, ಶ್ಲೋಕ್ ರಾಜೇಶ್ ಬಂಗೇರ, ಸುದೀಕ್ಷಾ ರಾಜೇಶ್ ಬಂಗೇರ, ಆಶೀಶ್ ಹೈಮೇಶ್ ಬಂಗೇರ, ಆಕಾಂಕ್ಷಾ ತಾರಾನಾಥ್ ಸುವರ್ಣ, ಮನ್ವಿತ್ ಮೋಹನ್‌ದಾಸ್ ಸುವರ್ಣ, ರೋಷನ್ ಜೆಪ್ಪು, ಲಕ್ಷಿಯ ವಿಜಯ್ ಸುವರ್ಣ, ಸಾಕ್ಷಿ ಗಣೇಶ್ ಕೋಟ್ಯಾನ್ ಅವರುಗಳನ್ನು ಈ ಸಂದರ್ಭದಲ್ಲಿ ಪುಷ ಗುಚ್ಚ, ಸ್ಮರಣಿಕೆ, ಸರ್ಟಿಫಿಕೇಟ್ ಹಾಗೂ ಗೌರವ ಧನ ನೀಡಿ ವೇದಿಕೆಯ ಗಣ್ಯರು ಸಭೆಯಲ್ಲಿ ಉಪಸ್ಥಿತ ಗಣ್ಯರು ಸೇರಿ ಗೌರವಿಸಿದರು.


ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಥಾಣೆಯ ಶಂಕರ್ ಬೆಳ್ಚಡ ಹಾಗೂ ಜ್ಯೋತಿ ಶಂಕರ್ ದಂಪತಿಗಳ ಪುತ್ರ ಶ್ರೇಯಸ್ ಬೆಳ್ಚಡ ಹಾಗೂ ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಬೆಂಗಳೂರು ಇಲ್ಲಿ ತೇರ್ಗಡೆಯಾದ ವಿರಾರಿನ ದಿ| ಭಾಸ್ಕರ್ ಕೋಟಿಯನ್ ಹಾಗೂ ಶರ್ಮಿಳಾ ಭಾಸ್ಕರ್‌ಕೋಟ್ಯಾನ್ ದಂಪತಿಯವರ ಸುಪುತ್ರಿ ಡಾ| ಶಿಫಾಲಿ ಬಿ. ಕೋಟ್ಯಾನ್ ಅವರ ಅನುಪಸ್ಥಿತಿಯಲ್ಲಿ ರಂಜನಿ ಸಾಲಿಯಾನ್ ಅವರುಗಳನ್ನು ವೇದಿಕೆ ಗಣ್ಯರು ಶಾಲು ಹೊದಿಸಿ ಫಲ ಪುಷ, ಸ್ಮರಣೆಕೆ ಹಾಗೂ ಗೌರವ ಧನ ನೀಡಿ ಸನ್ಮಾನಿಸಲಾಯಿತು.


ಡಾ|| ದಯಾನಂದ ಕುಂಬ್ಳ, ಉಪಾಧ್ಯಕ್ಷರಾದ ರಾಜೇಂದ್ರಕುಮಾರ್, ಅಪ್ಪುಂಜ್ಞಿ ಬಂಗೇರ, ಬಾಬು ಬಂಗೇರ ಸದಸ್ಯರನ್ನು ಉದ್ದೇಶಿಸಿ ಶುಭ ನುಡಿಗಳನ್ನಾಡಿದರು.


ಮತಭೇದಗಳನ್ನು ಮರೆತು ಸಮಾಜದ ಹಿತದೃಷ್ಟಿ ಗಮನದಲ್ಲಿರಿಸಿ ಒಗ್ಗಟ್ಟಾಗಿ ಇರಬೇಕು ಎಂದು ಅಧ್ಯಕ್ಷರಾದ ಕೃಷ ಎನ್. ಉಚ್ಚಿಲ್ ಕರೆನೀಡಿದರು ಸಭಿಕರ ಪರವಾಗಿ ಚಂದ್ರಶೇಖರ್ ಬೆಳ್ಚಡ, ಕುಮುದಾ ಕೋಟ್ಯಾನ್, ಸುಂದರ ಬಂಗೇರ,ರೆಮೇಶ್ ಉಳ್ಳಾಲ್, ದಿವ್ಯಾ ಕೋಟ್ಯಾನ್ ಸಲಹೆ ಸೂಚನೆ ನೀಡಿದರು.
ಮಹಾಸಭೆಗೆ ಭೋಜನ ವ್ಯವಸ್ಥೆಯನ್ನು ಮಾಡಿದ ಕಾರ್ಯಕಾರಿ ಸಮಿತಿಯ ಹಾಗೂ ಮಹಿಳಾ ಸಮಿತಿಗೆ ಅಧ್ಯಕ್ಷರು ಪುಷ ಗೌರವ ನೀಡಿದರು.

Leave a Reply

Your email address will not be published. Required fields are marked *