ಎರುಂಬು: ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಡಿ.28ರಂದು ವಿಶೇಷ ದೀಪಾರಾಧನೆ
ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸದಲ್ಲಿ ಬೊಳ್ನಾಡು ಶ್ರೀ ಚೀರುಂಭ ಭಗವತೀ ಮಾತೃ ಮಂಡಳಿಯ ಆಶ್ರಯದಲ್ಲಿ ಡಿಸೆಂಬರ್ 28, 2025ರ ಭಾನುವಾರ ಬೆಳಗ್ಗೆ 8 ಗಂಟೆಗೆ ಶ್ರೀ ಭಗವತೀ ಕ್ಷೇತ್ರದ ಭಂಡಾರ ನಿಲಯದಲ್ಲಿ ವಿಶೇಷ ದೀಪಾರಾಧನೆ ಕಾರ್ಯಕ್ರಮ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಸಪರಿವಾರ ಆಗಮಿಸಿ ಭಾಗವಹಿಸಿ, ಸಹಕಾರ ನೀಡಿ, ಪ್ರಸಾದ ಸ್ವೀಕರಿಸಿ ಶ್ರೀ ಭಗವತೀ ಮಾತೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಕಾರ್ನವರ್ ಅಚ್ಚಮಾರರು ಹಾಗೂ ಕೃಷ್ಣ ಎನ್. ಉಚ್ಚಿಲ್, ಗುರಿಕಾರರು ಮತ್ತು ಶಾಶ್ವತ ಆಡಳಿತ ಮೊಕ್ತೇಸರರು ವಿನಂತಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಜನೆಯೂ ಇರುತ್ತದೆ. ಬೆಳಗ್ಗೆ 9.30ರಿಂದ 10.30ರವರೆಗೆ ಬೊಳ್ನಾಡು ಶ್ರೀ ಭಗವತೀ ಭಜನಾ ಸಂಘ ಹಾಗೂ 10.30ರಿಂದ 12.00ರವರೆಗೆ ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ಭಜನಾ ಸಂಘ ಕುಟ್ಟಿತ್ತಡ್ಡ ಭಜನೆ ನಡೆಸಲಿವೆ.
ಇದಲ್ಲದೆ, ಬೊಳ್ನಾಡು ಕ್ಷೇತ್ರಕ್ಕೆ ಸೇರಿದ ಎಲ್ಲ ತಿಯ್ಯ ಸಮಾಜ ಬಾಂಧವರು ಪ್ರತಿ ಮನೆಯಿಂದ ಒಂದೊಂದು ಪೂಜೆ ಮಾಡಿಸಬೇಕೆಂದು ವಿಶೇಷ ವಿನಂತಿ ಮಾಡಲಾಗಿದೆ.
ಕಾರ್ಯಕ್ರಮವನ್ನು ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರು, ಪದಾಧಿಕಾರಿಗಳು, ಮಾತೃ ಮಂಡಳಿ ಎರುಂಬು, ಸೇವಾ ಸಮಿತಿ ಎರುಂಬು, ಭಜನಾ ಸಂಘ, ಯುವಜನ ಸಂಘ ಹಾಗೂ ಚಿಣ್ಣರ ಬಳಗದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಯೋಜಿಸಿದ್ದಾರೆ.