ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರ
ಪಡಾಂಕೊಡಿಯ (ಕೋಟ್ಯಾನ್) ತೀಯರ
ಮಾವಿನಡಿ ಕೊಪ್ಪಳ ತರವಾಡು
|| ಶ್ರೀ ಭಗವತೀ ಪ್ರಸನ್ನಾ ||
ಆತ್ಮೀಯ ಭಗವದ್ಭಕ್ತರೇ
ಸ್ವಸ್ತಿ | ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ ೨೨ ಸಲುವ ತಾರೀಕು 05.02.2026ನೇ ಗುರುವಾರದಂದು ಮಾವಿನಡಿ ಕೊಪ್ಪಳ ತರವಾಡಿನ ನೂತನವಾಗಿ ನಿರ್ಮಿಸಿದ ತರವಾಡು ಮನೆಯ ಗೃಹ ಪ್ರವೇಶ ಹಾಗೂ ಶ್ರೀ ದೈವಗಳಿಗೆ ಪ್ರತಿಷ್ಠಾ ಕಲಶಾಭಿಷೇಕವು ಬಡಾಜೆ ಬೀಡು ಶ್ರೀ ಗೋಪಾಲಕೃಷ್ಣ ತಂತ್ರಿಗಳವರ ದಿವ್ಯ ಹಸ್ತದಿಂದ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ ಜರಗಿಸಲು ನಿಶ್ಚಯಿಸಿರುತ್ತೇವೆ. ಆ ಪ್ರಯುಕ್ತ ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಭಗವತೀ ಮತ್ತು ಪರಿವಾರ ದೈವಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ.
ಮಾವಿನಡಿ ಕೊಪ್ಪಳ ತರವಾಡು

ಕಾರ್ಯಕ್ರಮ
04.02.2026, ಸಂಜೆ ಗಂಟೆ 5.00ಕ್ಕೆ
: ತಂತ್ರಿವರ್ಯರ ಆಗಮನ, ಸ್ವಾಗತ, ಪ್ರಾರ್ಥನೆ, ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ,
ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲ, ದೈವಗಳ ಮಂಚ ಅಧಿವಾಸ, ಕಲಶಾ ಅಧಿವಾಸ, ಅಧಿವಾಸ ಹೋಮ
05.02.2026, ಬೆಳಿಗ್ಗೆ ಗಂಟೆ 5.00ಕ್ಕೆ : ಗಣಪತಿ ಹೋಮ,
ನೂತನವಾಗಿ ನಿರ್ಮಿಸಿದ ತರವಾಡುಮನೆಯ ಗೃಹಪ್ರವೇಶ ಶ್ರೀ ದೈವಗಳಿಗೆ ಪ್ರತಿಷ್ಠಾ ಕಲಶಾಭಿಷೇಕ
ಸಹೃದಯಿ ಭಕ್ತ ಮಹಾಶಯರೇ,
ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ೨೦ ಮತ್ತು ೨೧ ಸಲುವ ತಾ. 04.03.2026ನೇ ಬುಧವಾರ ಮತ್ತು 05.03.2026ನೇ ಗುರುವಾರ ಕಾರ್ಯಕ್ರಮದಲ್ಲಿ ಸೂಚಿಸಿದಂತೆ ಶ್ರೀ ಸನ್ನಿಧಾನದಲ್ಲಿ ನಾಗ ತಂಬಿಲ ಮತ್ತು ವರ್ಷಾವಧಿ ಪರ್ವ ನಡೆಸುವುದೆಂದು ತೀರ್ಮಾನಿಸಲಾಗಿದೆ.
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೈವಗಳ ಮತ್ತು ನಾಗದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಕೃಷ್ಣ ಕಾರ್ನವರು, ಕೊಪ್ಪಳ, ಗೌರವಾಧ್ಯಕ್ಷರು, (ಶ್ರೀ ಭಗವತೀ ಕ್ಷೇತ್ರ, ಅಡ್ಕ) (09539110670);
ಸುಂದರ ಕುಂಪಲ, ಅಧ್ಯಕ್ಷರು (09741478387) ; ಸುಕುಮಾರ ಕೆ. ಕೊಪ್ಪಳ, ಪ್ರಧಾನ ಕಾರ್ಯದರ್ಶಿ
(9400742766); ನಾರಾಯಣ (ಲಂಡನ್). ಗೌರವ ಸಲಹೆಗಾರರು ; ರವೀಂದ್ರ. ಕೆ ಬೆಳ್ಳಪ್ಪಾಡರು (ಶ್ರೀ ಭಗವತೀ ಕ್ಷೇತ್ರ, ಅಡ್ಕ) ;
ಉಮೇಶ ಗುರಿಕಾರರು ಆರಿಕ್ಕಾಡಿ ; ಕೃಷ್ಣ ಗುರಿಕಾರರು ಕಯ್ಯಾರು ; ನಾರಾಯಣ ಗುರಿಕಾರರು ಕನ್ಯಾನ ; ಶ್ರೀಧರ ಕೊಪ್ಪಳ (ತರವಾಡು ಪೂಜಾರಿ) ; ಶ್ರೀಧರ ಪಂಜ (9746353864) ; ವಸಂತ ಕಾಸರಗೋಡು, ಉಪಾಧ್ಯಕ್ಷರು (9746248916) ; ಯಾದವ ಕೈರಂಗಳ (9980162747), ಮಹಿಳಾ ಸಮಿತಿ ಮತ್ತು ಕುಟುಂಬಿಕರು.