www.gurufront.com

ಮೂಲ್ಕಿ: ‘ಸಸಿಹಿತ್ಲು ಹಾಗೂ ಬಪ್ಪನಾಡು ದೇವಿ ಕ್ಷೇತ್ರಗಳಿಂದ ಭಕ್ತರ ಸಂಗಮವಾಗುವಂಥ ವಾತಾವರಣ ನಿರ್ಮಾಣವಾಗಬೇಕು. ಧಾರ್ಮಿಕ ಕ್ಷೇತ್ರಗಳು ಪ್ರಗತಿಯಾಗಿ ಭಕ್ತರ ಜೀವನದಲ್ಲೂ ಹೊಸತನ ‌ ನಿರ್ಮಾಣ-ವಾಗಬೇಕು’ ಎಂದು ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರೀ ‌ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಂ. ದುಗ್ಗಣ್ಣ ಸಾವಂತರು ಹೇಳಿದರು.

ಶ್ರೀಭಗವತಿ ದೇವಸ್ಥಾನದಲ್ಲಿ ಮಾರ್ಚ್‌ ಮೂಲ್ಕಿ ಬಳಿಯ ‌ ಸಸಿಹಿತ್ಲುವಿನ 4ರಿಂದ 8ರವರೆಗೆ ನಡೆಯಲಿರುವ ‌ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಭಗವತಿ ದೇವಸ್ಥಾನದ ಅನುವಂಶಿಕ ‌ ‌ ಮೊತ್ತೇಸರ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ಅಪ್ಪು ಪೂಜಾರಿ ಪ್ರಾರ್ಥನೆ ಸಲ್ಲಿಸಿದರು. ಆಡಳಿತ ಸಮಿತಿ ಅಧ್ಯಕ್ಷ ವಾಮನ್‌ ಇಡ್ಯಾ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಲ್.ವಿ.ಅಮೀನ್, ಧನಂಜಯ ಚಂದ್ರಶೇಖರ ಬೆಲ್ಕಡ, ಮುಂಬೈ ಬಿಲ್ಲವ ಶೆಟ್ಟಿ ಸಸಿಹಿತ್ತು, ಸಮಿತಿಯ ಪದಾಧಿ-ಕಾರಿಗಳಾದ ಸುನಿಲ್ ಆಳ್ವ, ದಿವಾಕರ ಸಾಮಾನಿ, ಕಸ್ತೂರಿ ಪಂಜ, ಚಂದ್ರಶೇಖರ ನಾನಿಲ್, ಗೀತಾ ಪಿ. ಕುಮಾರ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದಯ ಸುವರ್ಣ ಅಗ್ಗಿದ ಕಳಿಯ, ವಿನೋದ್ ಸಾಲ್ಯಾನ್ ಬೆಳ್ಳಾಯರು, ವಿನೋದ್ ಬೊಳ್ಳೂರು, ದಿನಕರ ಎಸ್. ಹಳೆಯಂಗಡಿ, ಗೀತಾಂಜಲಿ ಸುವರ್ಣ, ಸತೀಶ್ ಶೆಟ್ಟಿ, ಶೋಭೇಂದ್ರ ಸಸಿಹಿತ್ತು, ವಿ.ಕೆ.ಯಾದವ್ ಭೋಜ ಗುರಿಕಾರ, ರಮೇಶ್ ಬಂಗೇರ, ಸುರೇಶ್ ಬಂಗೇರ, ಸವಿತಾ ಉದಯ್, ರಜತ್ ಸಸಿಹಿತ್ತು, ಮೋಹನ್ ಸುವರ್ಣ, ಗಿರೀಶ್ ಶ್ರಿಯಾನ್, ಮೋಹನ್ ಶೆಟ್ಟಿಗಾ‌ರ್, ಕಿಶೋರ್ ಗುರಿಕಾರ, ನಾಗೇಶ್ ಬಂಗೇರ, ಧೀರಜ್ ಶ್ರಿಯಾನ್, ಕಿರಣ್ ಗುರಿಕಾರ ಭಾಗವಹಿಸಿದ್ದರು. ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು.

Leave a Reply

Your email address will not be published. Required fields are marked *