ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲೆ, ಕರ್ನಾಟಕ – ಉತ್ತರ
ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಉಪ್ಪಳ
ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವದ ಅಂಗವಾಗಿ ದೇಶವ್ಯಾಪಿ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ ದಿನಾಂಕ 11.03.2026 ಬುಧವಾರದಂದು ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರ ಐಲ, ಉಪ್ಪಳಕ್ಕೆ ಆಗಮಿಸಲಿದೆ.
ತಾವೆಲ್ಲರೂ ಸಕುಟುಂಬ ಸಮೇತರಾಗಿ ಉಪಸ್ಥಿತರಿದ್ದು ಶ್ರೀ ಸ್ವಾಮಿಯನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿ, ಭಗವಂತನ ಅನುಗ್ರಹವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

ಮಧ್ಯಾಹ್ನ 12:00 ರಿಂದ : ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಮಹಾದ್ವಾರದಿಂದ ಪೂರ್ಣ ಕುಂಭ ಸ್ವಾಗತ ಐಲ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರ ಐಲ ಉಪ್ಪಳದವರೆಗೆ
ಕಾರ್ಯಕ್ರಮಗಳು
ಮಧ್ಯಾಹ್ನ 12:30 ರಿಂದ : ಭವ್ಯ ಶೋಭಾಯಾತ್ರೆ, ಶ್ರೀ ಸತ್ಯಸಾಯಿ ಪಾದುಕಾ ದರ್ಶನ, : ನಾಮಸಂಕೀರ್ತನೆ, ಸತ್ಸಂಗ
ಮಧ್ಯಾಹ್ನ 1:30 : : ಮಹಾಮಂಗಳಾರತಿ, : ನಾರಾಯಣ ಸೇವೆ

ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ
ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯು ಸಾಯಿ ಪ್ರೇಮದ ದಿವ್ಯ ಪ್ರಯಾಣವಾಗಿದೆ. ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವತಾರದ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಈ ಪವಿತ್ರ ಯಾತ್ರೆ, LOVE ALL – SERVE ALL, HELP EVER – HURT NEVER ಎಂಬ ಅವರ ಶಾಶ್ವತ ಸಂದೇಶವನ್ನು ನಮ್ಮ ನಾಡಿನ ಪ್ರತಿಯೊಂದು ಮೂಲೆಗೂ ತಲುಪಿಸುವ ಉದ್ದೇಶವನ್ನು ಹೊಂದಿದೆ.
ಭಾರತದಾದ್ಯಂತ ಐದು ವಿಭಿನ್ನ ವಲಯಗಳಲ್ಲಿ ಐದು ರಥಗಳು ರಾಜ್ಯದಿಂದ ರಾಜ್ಯಕ್ಕೆ ಜಿಲ್ಲೆಯಿಂದ ಜಿಲ್ಲೆಗೆ, ಹೃದಯದಿಂದ ಹೃದಯಕ್ಕೆ ಸಂಚರಿಸುತ್ತಿವೆ. ಈ ಭವ್ಯಯಾತ್ರೆಯು ಎಲ್ಲ ರೀತಿಯ ಧರ್ಮ, ಜಾತಿ, ಮತ, ಪಂಥಗಳೆಂಬ ಅಡೆತಡೆಗಳನ್ನು ಮೀರಿ, “ವಸುದೈವ ಕುಟುಂಬಕಂ” ಎಂಬ ವಿಶ್ವಮಾನವೀಯ ಭಾವನೆಯನ್ನು ಜನರ ಹೃದಯಗಳಲ್ಲಿ ಜಾಗೃತಗೊಳಿಸುತ್ತಿದೆ.
ಪ್ರೇಮ ಪ್ರವಾಹಿನಿ ರಥಯಾತ್ರೆಯು 2025ರ ಏಪ್ರಿಲ್‌ನಲ್ಲಿ, ಭಗವಾನರ ಆರಾಧನಾ ಮಹೋತ್ಸವದಂದು ಆರಂಭಗೊಂಡು,18 ತಿಂಗಳುಗಳ ಕಾಲ ಭಾರತದ ಹೃದಯಭಾಗಗಳಲ್ಲಿ ಸಂಚರಿಸಿ, 2026ರ ನವೆಂಬರ್‌ನಲ್ಲಿ ಪ್ರಶಾಂತಿ ನಿಲಯಂನಲ್ಲಿ ಸಮಾಪ್ತಿಗೊಳ್ಳಲಿದೆ.
ಶ್ರೀ ಸ್ವಾಮಿಯ ಜನ್ಮಶತಮಾನೋತ್ಸವದ ಆಚರಣೆಯ ಭಾಗವಾಗಿರುವ ಈ ಪವಿತ್ರ ಯಾತ್ರೆಯಲ್ಲಿ ನಾವೆಲ್ಲರೂ ಸಕ್ರಿಯವಾಗಿ ಭಾಗಿಗಳಾಗೋಣ. ನಮ್ಮ ಸೇವಾಕ್ಷೇತ್ರಕ್ಕೆ ಭಗವಾನರನ್ನು ಪ್ರೀತ್ಯಾದರಗಳಿಂದ ಸ್ವಾಗತಿಸೋಣ. ಭಗವಂತನ ದರುಶನ ಪಡೆದು ಶ್ರೀ ಸಾಯಿಪ್ರೇಮವನ್ನು ಆಸ್ವಾದಿಸೋಣ. ಸಾಯಿಸಂದೇಶವನ್ನು ಪಸರಿಸುತ್ತಾ ಸಮಾಜದ ಪರಿವರ್ತನೆಗೆ ಮುನ್ನುಡಿ ಹಾಡೋಣ.
ತಮ್ಮೆಲ್ಲರನ್ನು ಆದರಪೂರ್ವಕವಾಗಿ ಸ್ವಾಗತಿಸುವ,
ಶ್ರೀ ಎಚ್ ಮಹಾಲಿಂಗ ಭಟ್, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕಾಸರಗೋಡು
ಶ್ರೀ ನವೀನ್ ಕುಮಾರ್, ಸಂಚಾಲಕರು ಮತ್ತು ಸಮಿತಿ ಸದಸ್ಯರು ಶ್ರೀ ಸತ್ಯಸಾಯಿ ಸೇವಾ ಸಮಿತಿ, ಉಪ್ಪಳ