ಶ್ರೀ ಗುರು ಚರಣಾಮೃತ ಕೃತಿ ಬಿಡುಗಡೆ
ಕಡಲ ಸೃಷ್ಟಿ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿರುವ ಸಂಜೀವ ಕೆ ಅವರು ಬರೆದಿರುವ ಶ್ರೀ ಗುರು ಚರಣಾಮೃತ ಹಾಗೂ ತೀಯಾ ಕುಲ ತಿಲಕ ಮಹಾದಾನಿ ರೋಹಿದಾಸ್ ಬಂಗೇರ ಅವರ ವ್ಯಕ್ತಿ ಪರಿಚಯ ಕೃತಿಯು ಮಂಗಳೂರಿನ ಪತ್ರಿಕಾ ಭವನದಲ್ಲಿ ಇಂದು ಬಿಡುಗಡೆಗೊಂಡಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯ ಅಧ್ಯಕ್ಷರಾದ. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿದರು.
ಮುಂಬೈಯ ಸಮಾಜಸೇವಕ ಶಂಕರ ಸುವರ್ಣ, ಉದ್ಯಮಿ ಗೋವಿಂದ ಮಂಜೇಶ್ವರ, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು ಜಯಂತಿ ಸುವರ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಕೃತಿಯ ಕೃತಿಕಾರರಾದ ಸಂಜೀವ. ಕೆ .ಉಪಸ್ಥಿತರಿದ್ದರು.