www.gurufront.com


ಡೊಂಬಿವಲಿಯ ವೈದ್ಯಕೀಯ ಸಹಾಯ ನಿಧಿ ನ್ಯಾಸ ಪ್ರತಿ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ `ಆರೋಗ್ಯ ಸೇವಾವೃತ್ತಿ ಪ್ರಶಸ್ತಿ ನೀಡುತ್ತಾ ಬರುತ್ತಿದೆ. ಇದು ಅತ್ಯಂತ ಗೌರವಾನ್ವಿತವಾದ ಪ್ರಶಸ್ತಿಯಾಗಿದೆ.

ಈ ವಷ ಈ ಪ್ರತಿಷ್ಠಿತ ಪ್ರಶಸ್ತಿ ಥಾಣೆಯ ಖ್ಯಾತ ಹೃದಯರೋಗ ತಜ್ಞರು ಹಾಗೂ ಸಮಾಜ ಸೇವಕರೂ ಆದ ಎಂ.ಡಿ. (ಮೆಡಿಸಿನ್) ಡಿ.ಎ.ಎಂ. ಇಂಟರ್ ನ್ಯಾಶನಲ್ ಕಾರ್ಡಿಯಾಲೊಜಿ ಡಾ. ದಯಾನಂದ ಕುಂಬ್ಳ, ಅವರಿಗೆ ಆಯ್ಕೆಯಾಗಿದ್ದು ಸೆ. ೨೮ ರಂದು ಥಾಣೆಯ ಸಹಯೋಗ್ ಮಂದಿರ ಸಭಾಗೃಹ, ನೌಪಾಡ, ಠಾಣೆ ಇಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ವಿಶ್ವಾಸ್ ಪುರಾಣಿಕ್ ಅಥಿತಿ ಅಭ್ಯಾಗತರ ಸಮ್ಮಖದಲ್ಲಿ ಪ್ರದಾನ ಮಾಡಲಾಯಿತು.

ವೈದ್ಯಕೀಯ ಸಹಾಯ ನಿಧಿ ನ್ಯಾಸ ಸಂಸ್ಥೆ ಕಳೆದ ೨೪ ವರ್ಷಗಳಿಂದ ಈ ಪ್ರಶಸ್ತಿಯ ಮೂಲಕ ವೈದ್ಯಕೀಯ ಕ್ಷೇತ್ರದ ಪ್ರಮುಖ ಹಾಗೂ ಗೌರವಾನ್ವಿತ ವೈದ್ಯರನ್ನು ಸನ್ಮಾನಿಸಲಾಗುತ್ತಿದ್ದು, ಡಾ. ಕುಂಬ್ಳ ಅವರ ಸಮಾಜಸೇವೆ ಮತ್ತು ಆರೋಗ್ಯ ಸೇವಾ ಕ್ಷೇತ್ರಕ್ಕೆ ಸಲ್ಲಿಸಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಈ ವಷದ ಪ್ರಶಸ್ತಿ ಅವರಿಗೆ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *