
ಕನಿಲ ಶ್ರೀ ಭಗವತೀ ಕ್ಷೇತ್ರ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಕ್ಷೇತ್ರದ ವಾರ್ಷಿಕ ಉತ್ಸವ ೧೯.೦೪.೨೦೨೫ ರಂದು ಜರಗಿತು. ಕ್ಷೇತ್ರ ಭರಣ ಸಮಿತಿ ಕ್ಷೇತ್ರ ಜೀರ್ಣೋದ್ಧಾರ ಮಾಡುವ ಬಗ್ಗೆ ವಾರ್ಷಿಕ ಮಹಾಸಭೆಯ ನಿರ್ಧಾರದಂತೆ ಭಗವತೀ ತಾಯಿಯಲ್ಲಿ ನಿವೇದಿಸಿದಾಗ ಮಹಾತಾಯಿಯ ಅಪ್ಪಣೆ ಸಮ್ಮತಿ-ಕೃಪೆ ದೊರಕಿತು. ವಾರ್ಷಿಕ ಉತ್ಸವಕ್ಕೆ ಮೊಟಕು ಬಾರದಂತೆ ಮುಂದಿನ ವಾರ್ಷಿಕ ಉತ್ಸವಕ್ಕೆ ಮೊದಲು ಜೀರ್ಣೋದ್ಧಾರ ಕಾರ್ಯ ನೆರವೇರಿಸಿ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುವಂತೆ ಕಾರ್ಯ ಪ್ರವೃತ್ತರಾಗಲು ನಿಶ್ಚಯಿಸಲಾಯಿತು. ಅದರಂತೆ ಒಂದು ವರ್ಷದ ಅವಧಿಯಲ್ಲಿ ವಾರ್ಷಿಕ ಉತ್ಸವಕ್ಕೆ ತಡೆ ಇಲ್ಲದೆ ಬ್ರಹ್ಮಕಲಶೋತ್ಸವ ಜರಗುವುದು ದೈವೆಚ್ಛೆ – ದೈವಕೃಪೆ ಎನ್ನಬಹುದು.

ಈ ಮಹಾತ್ಕಾರ್ಯದ ಹಿಂದೆ ಕನಿಲ ಜೀರ್ಣೋದ್ಧಾರ ಸಮಿತಿ ಮತ್ತು ಮುಂಬಯಿ ಜೀರ್ಣೋದ್ಧಾರ ಸಮಿತಿ, ಕ್ಷೇತ್ರದ ಸದಸ್ಯರ ಮನೆಗಳ, ದಾನಿಗಳ ಕೊಡುಗೆ ಇದೆ. ಮುಷ್ಠಿ ಕಾಣಿಕೆ ಸಮಾರಂಭದಲ್ಲಿ ದಾನಿಗಳಾಗಿ ಕೃಷ್ಣ ಎನ್. ಉಚ್ಚಿಲರು ೨೫ ಲಕ್ಷವನ್ನು ತನ್ನ ತಾಯಿಯ ಕೈಯಲ್ಲಿ ನೀಡಿ ಭಗವತೀ ಕೃಪೆಗೆ ಪಾತ್ರರಾದದ್ದನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ. ನಂತರ ಕೃಷ್ಣ ಎನ್. ಉಚ್ಚಿಲರು ಕನಿಲ ಜೀರ್ಣೋದ್ಧಾರ ಸಮಿತಿಯನ್ನು ಮುಂಬಯಿಗೆ ಆಹ್ವಾನಿಸಿ ಅವರಿಗೆ ಎಲ್ಲಾ ತಂಗುವ ವ್ಯವಸ್ಥೆಯನ್ನು ನೀಡಿ ಮುಂಬಯಿ ಜೀರ್ಣೋದ್ಧಾರ ಸಮಿತಿಯನ್ನು ಅವರ ನೇತೃತ್ವದಲ್ಲಿ ರೂಪಿಕರಿಸಿ ಅದರ ನೇತೃತ್ವವನ್ನು ವಹಿಸಿ ಆರ್ಥಿಕ ಸಹಾಯ ನೀಡಿದ್ದು ಕ್ಷೇತ್ರ ಸಮಿತಿಗೆ ಆನೆ ಬಲ ನೀಡಿತು. ಮಹಾದಾನಿ ಶ್ರೀ ಸದಾಶಿವ ಶೆಟ್ಟಿ ಕೂಳೂರು-ಕನ್ಯಾನ ಅವರು ಜೀರ್ಣೋದ್ಧಾರ ಸಮಿತಿಯಲ್ಲಿ ಗೌರವ ಸ್ಥಾನದಲ್ಲಿ ಇರುವುದು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಆರ್ಥಿಕ ಕೊರತೆಯಾಗಲಾರದು. ಜಾತಿ ಬಾಂಧವರ ಮನೆ ವಂತಿಗೆ, ದಾನಿಗಳ ಪುಣ್ಯ ಕೊಡುಗೆ, ದಿನಿನಿತ್ಯದ ಶ್ರಮದಾನದ ಭಕ್ತರ ಉತ್ಸವ ಎಲ್ಲವೂ ಕೊಡುಗೆಯಾಗಿದೆ. ಒಂದೇ ಮಾತಲ್ಲಿ ಹೇಳುವುದಾದರೆ ಎಲ್ಲಾ ಮಹಾತಾಯಿಯ ಲೀಲೆ ಎನ್ನಬಹುದು!

ಕ್ಷೇತ್ರದ ಮುಂಭಾಗದ ಪುರಾಣ ಮೆಟ್ಟಲು ದಾರಿ ‘ಮೂಡುನಡೆ’ ಜೀರ್ಣೋದ್ಧಾರಗೊಳ್ಳಲಿದೆ. ಕ್ಷೇತ್ರದ ಚರಿತ್ರೆಯಲ್ಲಿ ‘ಮೂಡುನಡೆ’ ಮತ್ತು ‘ಪಡುನಡೆ’ ಚರಿತ್ರೆಯುಳ್ಳ ನಡೆ-ದಾರಿಗಳು. ಮೂಡುನಡೆ ಕ್ಷೇತ್ರಕ್ಕೆ ಬರುವ ಮುಂದಿನ ದಾರಿಯಾದರೆ ಪಡು ನಡೆ ಕ್ಷೇತ್ರಕ್ಕೆ ಭಂಡಾರ ಬರುವ ಹಿಂದಿನ ದಾರಿ. ‘ಮೂಡು ನಡೆ’ಯನ್ನು ನವೀಕರಿಸಲು ಕೃಷ್ಣ ಎನ್. ಉಚ್ಚಿಲರು ಸೇವಾ ರೂಪದಲ್ಲಿ ನೀಡಲು ಸಿದ್ಧರಾಗಿದ್ದಾರೆ….. ಶುಭಂ.