
ಉಸಿರನ್ನು ಗಮನಿಸು । ಗಮನಿಸಿ ಗಮನಿಸಿ ಮುಕ್ತಿಯ ಪಡೆ ಎಂದ ಬುದ್ಧ ।
ಅದು ಇದ್ದ ಹಾಗೇ ನೋಡು ಮೂಗಿನ ದ್ವಾರದಲ್ಲಿ
ಮೂಗಿನ ಪರದೆಗೆ ಸ್ಪರ್ಶಿಸುವದನ್ನು ಗಮನಿಸು |
ಉಸಿರ ಅನುಭವ ಆಗದಿದ್ದಾಗ । ದೀರ್ಘ ಉಸಿರ ಒಂದೆರಡು ಸಲ ಎಳೆ |
ದೀರ್ಘ ಉಸಿರ ಅಭ್ಯಾಸ ಬೇಡ |
ಸ್ಪರ್ಶ ಅರಿವು ತಿಳಿಯಲು ಅಷ್ಟೇ ಎಂದ ಬುದ್ಧ |
ಪದ್ಮಾಸನ, ಸಿದ್ಧಾಸನದಲ್ಲಿ ಕೂರು । ಯಾವುದೇ ಆರಾಮದ ಆಸನ ಇರಲಿ |
ಬೆನ್ನು. ಕತ್ತು ನೇರವಾಗಿರಲಿ | ಆರಾಮವಾಗಿ ಕಣ್ಣು ಮುಚ್ಚಿ ಧ್ಯಾನಿಸು ಎಂದ ಬುದ್ಧ ॥
ಧ್ಯಾನ ಮಂದಿರದಲ್ಲಿ ಶೀಲವ ಪಾಲಿಸು ಗುಣ ಶೀಲವೇ ಧ್ಯಾನದ ಪಂಚಾಂಗ ।
ಮೌನವ ಪಾಲಿಸಿ ಮೌನ ವೃತದಲ್ಲಿರು ಪ್ರಾರ್ಥನೆ, ಸತ್ಸಂಗದಿ ಗುರುವಿಗೆ ಶರಣಾಗಿ ಇರು |
ಗುರು ಹಿರಿಯರಿಗೆ ನಮಿಸು । ಗುರುವಿಗೆ ಶರಣಾಗಿ ಸೇವೆಯ ಮಾಡು |
ಧ್ಯಾನ ಧರ್ಮದಿ ಸುಖವ ಅನುಭವಿಸು । ಧ್ಯಾನದಿ ಸಮೃದ್ಧಿ ಪಡೆದು ಗುರುವಾಗಿ ಮೆರೆಯು ॥
ಎಲ್ಲಾ ಕರ್ಮಕ್ಕೆ ಮನವೇ ಕಾರಣ । ಮನವೇ ಶಾರೀರಿಕ ಕರ್ಮಕ್ಕೆ ಕಾರಣ |
ಮನವ ಶಾಂತದಿ ನಿಗ್ರಹಿಸು ಶೀಲ ಧರ್ಮದಿ ಮನವ ಶುದ್ದೀಕರಿಸು ।।
ಕಾಮ, ಮದ, ಮತ್ಸರ, ಕೋಪ, ದ್ವೇಷ, ರಾಗ, ಲೋಭವ ಬಿಡು |
ದಾನ ಧರ್ಮ ಪುಣ್ಯ ಕಾರ್ಯ ಮಾಡಿ -ಪಾಪಕರ್ಮದಿ ದೂರವಿದ್ದು ಧ್ಯಾನಿಸು |
-ಕಡಲ ಸೃಷ್ಟಿ