www.gurufront.com

ಡಿಸೆಂಬರ್ 14: ‘48ನೇ ಭಾವೈಕ್ಯ ಬಂಟರ ಮಹಾಸಮಾಗಮ’

ದುಬೈ: ಯುಎಇ ಬಂಟರ ಸಮುದಾಯದ ಅತ್ಯಂತ ದೊಡ್ಡ ಸಾಮೂಹಿಕ ಸಂಭ್ರಮ ‘48ನೇ ಭಾವೈಕ್ಯ ಬಂಟರ ಮಹಾಸಮಾಗಮ’ ಡಿಸೆಂಬರ್ 14, 2025ರಂದು ಭಾನುವಾರ ದುಬೈಯ ಶೇಖ್ ಝಯೀದ್ ರಸ್ತೆಯಲ್ಲಿರುವ ಮಿಲೇನಿಯಂ ಪ್ಲಾಜಾ ಡೌನ್‌ಟೌನ್ ಹೋಟೆಲ್ (ಹಳೆಯ ಕ್ರೌನ್ ಪ್ಲಾಜಾ) ಸಭಾಂಗಣದಲ್ಲಿ ಭರ್ಜರಿಯಾಗಿ ನಡೆಯಲಿದೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾವೈಭವದ ಜೊತೆಗೆ ಪ್ರತಿಷ್ಠಿತ ‘ಬಂಟ ವಿಭೂಷಣ ಪ್ರಶಸ್ತಿ’ ಪ್ರದಾನ ಸಮಾರಂಭವೂ ಜರುಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

  • ತುಳುನಾಡ ಮಣ್ಣ್‌ದ ಮಹಿಮೆ
  • ಭಾರತದ ಸಂಸ್ಕೃತಿಯ ಪಯಣ
  • ಬಂಟೆರ್ನ ಐಸಿರಿ (ಬಂಟ ಸಮುದಾಯದ ವೈಭವ)
  • ಕಿರುಚಿತ್ರ ಸ್ಪರ್ಧೆ

ಯುಎಇಯಾದ್ಯಂತದ ಬಂಟ ಬಾಂಧವರು ಈ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ತೋರಲಿದ್ದಾರೆ.

ಬಂಟ ವಿಭೂಷಣ ಪ್ರಶಸ್ತಿ – 2025

ಈ ಬಾರಿಯ ಅತ್ಯಂತ ಪ್ರತಿಷ್ಠಿತ ‘ಬಂಟ ವಿಭೂಷಣ ಪ್ರಶಸ್ತಿ’ಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರೂ, ಪ್ರಖ್ಯಾತ ಕಂಬಳ ಆಯೋಜಕರೂ ಆದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪ್ರದಾನಿಸಿ ಗೌರವಿಸಲಾಗುವುದು.

ವಿಶೇಷ ಅತಿಥಿಗಳು

  • ಕನ್ನಡ ಚಿತ್ರರಂಗದ ‘ಡಿವೈನ್ ಸ್ಟಾರ್’ ರಿಷಭ್ ಶೆಟ್ಟಿ
  • ಬಾಲಿವುಡ್ ನಟ ವಿವೇಕ್ ಒಬೆರಾಯ್

ಕಾರ್ಯಕ್ರಮವನ್ನು ಚಿತ್ರನಟ ಸಾಯಿಲ್ ರೈ ಮತ್ತು ನಯನ ಶೆಟ್ಟಿ ಅವರು ಆಕರ್ಷಕವಾಗಿ ನಿರೂಪಿಸಲಿದ್ದಾರೆ.

ವಿಶೇಷ ಆಫರ್

ಬೆಳಗ್ಗೆ 10 ಗಂಟೆಯೊಳಗೆ ಸಭಾಂಗಣಕ್ಕೆ ಆಗಮಿಸುವ ಎಲ್ಲ ಬಂಟ ಬಾಂಧವರಿಗೆ:

  • ಉಚಿತ ಪ್ರವೇಶ
  • 8 ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅದೃಷ್ಟ ಸೆಳೆತದಲ್ಲಿ ಭಾಗವಹಿಸುವ ಅವಕಾಶ!

ಯುಎಇ ಬಂಟ್ಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಅವರು ಮಾತನಾಡಿ,
“48ನೇ ವರ್ಷದ ಈ ಐತಿಹಾಸಿಕ ಮಹಾಸಮಾಗಮಕ್ಕೆ ಯುಎಇಯಾದ್ಯಂತದ ಎಲ್ಲ ಬಂಟ ಕುಟುಂಬಗಳು ಕುಟುಂಬ ಸಮೇತ ಆಗಮಿಸಿ, ಒಗ್ಗಟ್ಟಿನ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪೋಷಕರಾದ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷ ಪ್ರೇಮ್ ನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಹಾಗೂ 2025ರ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *