ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭ ಮುಹೂರ್ತ ಡಿಸೆಂಬರ್ 12ಕ್ಕೆ

ಕಾಸರಗೋಡು, ಡಿಸೆಂಬರ್ 10: ಕನಿಲ ಶ್ರೀ ಭಗವತೀ ದೇವಸ್ಥಾನದ ವಿಶಾಲ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಿರ್ಮಾಣಗೊಂಡಿರುವ ನೂತನ ಧ್ವಜಸ್ತಂಭದ ಕಾಂಡಕ್ಕೆ ಸಂಪ್ರದಾಯಾನುಸಾರ ಶುದ್ಧ ಎಳ್ಳೆಣ್ಣೆಯಲ್ಲಿ ಮುಳುಗಿಸುವ ಪವಿತ್ರ ಕಾರ್ಯಕ್ರಮ ಡಿಸೆಂಬರ್ 12ರಂದು ನಡೆಯಲಿದೆ.
ದೇವಾಲಯದ ಆವರಣದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ನಿರ್ಮಿತವಾದ ಬೃಹತ್ ಧ್ವಜಸ್ತಂಭದ ಮರವನ್ನು ಆಯ್ದ ಶುಭ ಮುಹೂರ್ತದಲ್ಲಿ ಎಳ್ಳೆಣ್ಣೆಯ ತೊಟ್ಟಿಗೆ ಇಳಿಸಲಾಗುವುದು ಎಂದು ದೇವಸ್ಥಾನದ ಮೊಕ್ತೇಸರರು ತಿಳಿಸಿದ್ದಾರೆ.
ಈ ಪುರಾತನ ಸಂಪ್ರದಾಯದಂತೆ ಮರವನ್ನು ಸುಮಾರು ನಾಲ್ಕು ತಿಂಗಳ ಕಾಲ ಶುದ್ಧ ಎಳ್ಳೆಣ್ಣೆಯಲ್ಲಿ ಮುಳುಗಿಸಿ ಸಂರಕ್ಷಿಸಿದ ಬಳಿಕವೇ ಧ್ವಜಸ್ತಂಭವನ್ನು ನಿಲ್ಲಿಸಲಾಗುವುದು.
ಶುಭ ಮುಹೂರ್ತ ವಿವರ
ದಿನಾಂಕ : ಡಿಸೆಂಬರ್ 12, 2025 (ಶುಕ್ರವಾರ)
ಸಮಯ : ಬೆಳಗ್ಗೆ 10:35 ರಿಂದ 11:45 ರವರೆಗೆ
ಈ ಶುಭ ಸಂದರ್ಭದಲ್ಲಿ ಭಕ್ತರು ಹೆಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಕನಿಲ ಮಾತೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ.