ಎರುಂಬು: ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಡಿ.28ರಂದು ವಿಶೇಷ ದೀಪಾರಾಧನೆ

ಪುತ್ತೂರು: ನೆಲ್ಲ್ಯಾಡಿಯ ಸಂತ ಅಲ್ಫೋನ್ಸಾ ದೇವಾಲಯದ ಯುವಕರು ಈ ಬಾರಿ ಎಲ್ಲೇ ಇಲ್ಲದಷ್ಟು ಭರ್ಜರಿ ಕೆಲಸ ಮಾಡಿ ಬಿಟ್ಟಿದ್ದಾರೆ. 42 ಅಡಿ ಎತ್ತರದ ಬೃಹತ್ ಕ್ರಿಸ್‌ಮಸ್ ನಕ್ಷತ್ರವನ್ನು ತಯಾರಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಈ ವರ್ಷದ ಅತಿ ಎತ್ತರದ ಮತ್ತು ಅತಿ ದೊಡ್ಡ ನಕ್ಷತ್ರದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಂತ ಅಲ್ಫೋನ್ಸಾ ಚರ್ಚ್‌ನ ಎಸ್‌ಎಂವೈಎಂ (SMYM) ಯುವ ತಂಡದ ಸದಸ್ಯರು ತಮ್ಮ ಕೈಚಳಕದಿಂದ ಈ ಅದ್ಭುತ ನಕ್ಷತ್ರಕ್ಕೆ ಜೀವ ತುಂಬಿದ್ದ್ದಾರೆ. ಒಗ್ಗಟ್ಟು, ಪರಿಸರ ಸ್ನೇಹಿ ಅಲಂಕಾರ ಹಾಗೂ ಸಾಮರಸ್ಯ – ಈ ಮೂರು ಸಂದೇಶಗಳನ್ನು ಒಳಗೊಂಡಂತೆ ವಿನ್ಯಾಸಗೊಳಿಸಿರುವ ಈ ನಕ್ಷತ್ರ ಕೇವಲ ದೊಡ್ಡದು ಮಾತ್ರವಲ್ಲ, ಅರ್ಥಪೂರ್ಣವೂ ಆಗಿದೆ.
ಫಾ. ಶಾಜಿ ಮ್ಯಾಥ್ಯೂ ಮತ್ತು ಫಾ. ಅಲೆಕ್ಸ್ ಜಾನ್ಸನ್ ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಈ ಕೃತಿ ಈಗ ನೆಲ್ಲ್ಯಾಡಿಯ ಹೆಮ್ಮೆಯ ಸಂಕೇತವಾಗಿ ಮಿನುಗುತ್ತಿದೆ. ಪ್ರತಿ ಸಂಜೆಯೂ ದೂರದೂರುಗಳಿಂದ ಜನರು ಈ ಅಪೂರ್ವ ದೃಶ್ಯವನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ರಾತ್ರಿಯ ಅಂದರೆ ನೆಲ್ಲ್ಯಾಡಿ ರಸ್ತೆಯೇ ಜನಸಾಗರ!
ಈ ಯುವಕರ ಸೃಜನಶೀಲತೆಗೆ ಮತ್ತೊಮ್ಮೆ ಚಪ್ಪಾಳೆ ತಟ್ಟೋಣ – ಮೆರ್ರಿ ಕ್ರಿಸ್‌ಮಸ್!