ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ; ವಿಜೃಂಭಣೆಯಿಂದ ನೆರವೇರಿದ 18ನೇ ವರ್ಷದ ಸಾಮೂಹಿಕ ವಿಶೇಷ ಹೂವಿನ ಪೂಜೆ
ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ ವತಿಯಿಂದ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ೧೮ನೇ ವರ್ಷದ ಸಾಮೂಹಿಕ ವಿಶೇಷ ಹೂವಿನ ಪೂಜೆ ಜರಗಿತು. ಸಭಾ ಕಾರ್‍ಯಕ್ರಮದಲ್ಲಿ ಕ್ಷೇತ್ರದ ಶ್ರೀ ಕೃಷ್ಣ ಕಾರ್ನವರ್‌ರವರನ್ನು ಸನ್ಮಾನಿಸಲಾಯಿತು. ಅವರು ಸುಮಾರು 65 ವರ್ಷಗಳ ಕಾಲ ಭಗವತೀ ತಾಯಿಯ ತುಂಬು ಹೃದಯದ ಜನಮನದ ಸಾವಿರಾರು ಅಭಿಮಾನಿಗಳನ್ನು ಪಡೆದ ತೀಯಾ ಸಮಾಜದ ಇದುವರೆಗೆ ಕಂಡರಿಯದ ಮಹಾನ್ ವ್ಯಕ್ತಿ. ಭಗವತೀ ಸೇವೆಯ ಕಾರ್ನವರ್ ಎಂದು ಪ್ರಸಿದ್ಧಿ ಪಡೆದಿದ್ದಾರೆ.

ಶ್ರೀಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಭಗವತೀ ಪಾತ್ರಿಯಾಗಿ ಸೇವೆ ಸಲ್ಲಿಸಿದ ಕೆಂಜಿಲ ಶ್ರೀ ಮೋನಪ್ಪ ಬೆಳ್ಚಪ್ಪಾಡರನ್ನು ಸಭಾ ಅತಿಥಿಗಳು ಮತ್ತು ಕ್ಷೇತ್ರ ಅಚ್ಚಮಾರರು, ಇತರ ಕ್ಷೇತ್ರಗಳಿಂದ ಆಗಮಿಸಿದ ಅಚ್ಚಮಾರರು ಸನ್ಮಾನಿಸಿದರು. ಯಕ್ಷಗಾನ ಕಲಾ ಕ್ಷೇತ್ರಕ್ಕೆ ಅದ್ಭುತ ಸೇವೆ ನೀಡಿದ ಶ್ರೀ ಚಂದ್ರಹಾಸ, ಪೊನ್ನೆತ್ತೋಡು, ಕಯ್ಯಾರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುರೇಂದ್ರ ಕೊಪ್ಪಳ, ಅವರನ್ನು ಅವರ ಬಹುಮುಖ ಸೇವೆಗೆ ಸನ್ಮಾನಿಸಲಾಯಿತು. ಅವರು ಕ್ಷೇತ್ರದ ಸೇವಾಕರ್ತರಾಗಿ, ಪದಾಧಿಕಾರಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಅಧ್ಯಕ್ಷಕಾಗಿ ಶ್ರೀ ಪಿ. ಕೃಷ್ಣ ಅಡ್ಕ (ಅಧ್ಯಕ್ಷರು ಅಡ್ಕ ಶ್ರೀ ಭಗವತೀ ತೀಯಾ ಸೇವಾ ಸಂಘ) ವೇದಿಕೆಯಲ್ಲಿದ್ದರು. ಶ್ರೀಮತಿ ಅರ್ಪಿತಾ ಪ್ರಶಾಂತ್ ಶೆಟ್ಟಿ, ಕಟಪಾಡಿ (ಸಹಾಯಕ ಪ್ರಾಧ್ಯಾಪಕರು, ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು, ಮಣಿಪಾಲ) ಇವರು ಧಾರ್ಮಿಕ ಭಾಷಣ ನೀಡಿದರು. ಶ್ರೀ ಸದಾನಂದ. ಕೆ (ಪ್ರಧಾನ ಕಾರ್ಯದರ್ಶಿ, ತೀಯಾ ಸಮಾಜ, ಬೆಂಗಳೂರು), ಶ್ರೀಮತಿ ಮಮತಾ ಶಶಿಧರ ಶೆಟ್ಟಿ, ಗ್ರಾಮಚಾವಡಿ, ಮುಟ್ಟಂ, ಶಿರಿಯ ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ಅಮಿತಾ ಆನಂದ, ವೀರನಗರ, ಅಡ್ಕ (ಅಧ್ಯಕ್ಷೆ, ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಂಘ) ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಸುರೇಂದ್ರ ಕೊಪ್ಪಳ (ಮಾಜಿ ಅಧ್ಯಕ್ಷರು, ಅಡ್ಕ ಶ್ರೀ ಭಗವತೀ ಯುವಜನ ಸೇವಾ ಸಂಘ), ಶ್ರೀ ಚಂದ್ರಹಾಸ, ಪೊನ್ನೆತ್ತೋಡು, ಕಯ್ಯಾರು (ಯಕ್ಷಗಾನ ಕಲಾವಿದರು) ಇವರನ್ನು ಸನ್ಮಾನಿಸಲಾಯಿತು.