ವಂದೇ ಮಾತರಂ – ರಾಷ್ಟ್ರ ದೇವೋ ಭವ

ಸ್ವಾತಂತ್ರ್ಯ ಪೂರ್ವದಲ್ಲಿ ಸಿದ್ದವಾದ ವಂದೇ ಮಾತರಂ ಗೀತೆ 150 ವರ್ಷ ಪೂರೈಸಿದ್ದು, ತುಳು ಸಮ್ಮೇಳನವನ್ನು ಈ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ತುಳು ಭಾಷೆಯನ್ನು ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ವಂದೇ ಮಾತರಂ ಗೀತೆಯನ್ನು ತುಳು ಲಿಪಿಯಲ್ಲಿ ಬರೆಯುವ ಕಾರ್ಯ ಮಾಡಲಾಗಿದೆ. ಹಲವಾರು ಉಪನಿಷತ್ತುಗಳನ್ನು, ಭಗವದ್ಗೀತೆಯನ್ನು ತುಳು ಲಿಪಿಯಲ್ಲಿ ಬರೆಯಲಾಗಿದೆ. ವ್ಯಕ್ತಿ ವಿಕಾಸದಿಂದಲೇ ರಾಷ್ಟ್ರ ವಿಕಾಸ ಸಾಧ್ಯವಾಗುತ್ತದೆ. ಸಾಹಿತ್ಯ ಸಮ್ಮೇಳನದ ಮೂಲಕ ರಾಷ್ಟ್ರ ವಿಕಾಸ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿದೆ.
ರಾಷ್ಟ್ರೀಯತೆಯ ಹಾಗೂ ದೇಶೀಯತೆಯ ಸಮನ್ವಯ ಮಾಡುವ ನಿಟ್ಟಿನಲ್ಲಿ ಪ್ರಯತ್ನವಾಗಿದೆ. ಆದರ್ಶ ರಾಷ್ಟ್ರದ ನಿರ್ಮಾಣಕ್ಕೆ ಅಡಿಗಲ್ಲಾಗಬೇಕೆಂಬ ಪ್ರಯತ್ನ ಮಾಡಲಾಗುತ್ತಿದೆ. ಒಡಿಯೂರು ಶ್ರೀಗ್ರಾಮವಿಕಾಸ ಯೋಜನೆಯ ಮೂಲಕ ಸಂಸ್ಕಾರ-ಸಹಕಾರ-ಸಂಘಟನೆ-ಸಮೃದ್ಧಿ ಎಂಬ ಧೈಯವಾಕ್ಯದೊಂದಿಗೆ ಸಂಸ್ಕಾರೋತ್ಸವದ ಮೂಲಕ 85 ಗ್ರಾಮಗಳನ್ನು ತಲುಪುವ ಕಾರ್ಯ ಕ್ಷೇತ್ರದಿಂದ 20 ವರ್ಷಗಳ ಹಿಂದೆಯೇ ನಡೆದಿದೆ. ಸಾಮರಸ್ಯದ ಭಾವ ಪ್ರತಿಯೊಬ್ಬರಲ್ಲಿ ಬಂದರೆ ಸಮಾಜ ಸುಂದರವಾಗುತ್ತದೆ. ಗ್ರಾಮ ರಾಜ್ಯದ ಕಲ್ಪನೆ ಸಾಕಾರಗೊಂಡಾಗ ರಾಮ ರಾಜ್ಯ ನಿರ್ಮಾಣವಾಗುತ್ತದೆ. ಪೇಟೆಯ ಅಂದ ಚಂದ ಗ್ರಾಮದಲ್ಲಿದ್ದು, ಗ್ರಾಮ ಸಮೃದ್ಧವಾದಾಗ ನಗರ ಬೆಳೆಯಲು ಸಾಧ್ಯವಾಗುತ್ತದೆ.
ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್