www.gurufront.com

॥ ಶ್ರೀ ಭಗವತೀ ಪ್ರಸನ್ನ: ॥

ಸಜಿಪ-ಕೊಳಕೆ ಪುಲ್ಲಾಂತೀಯಾ ತರವಾಡು
ಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಡು ಕುಲವನ್ ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನ
ಸಜಿಪ-ಮೂಡ, ಬಡಂಗಮಜಲು, ಬಂಟ್ವಾಳ-574 231, ದ.ಕ. ಜಿಲ್ಲೆ

ತಾ. 07-02-2026ನೇ ಶನಿವಾರ ಮತ್ತು ತಾ. 08-02-2026ನೇ ರವಿವಾರ

ಪ್ರಿಯರೇ,

ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂ|ರದ ಮಕರ ಮಾಸ ದಿನ ೨೪ ಮತ್ತು ೨೫ ಸಲುವ ತಾ. 07-02-2026ನೇ ಶನಿವಾರ ಮತ್ತು ತಾ. 08-02-2026ನೇ ರವಿವಾರದಂದು ತರವಾಡಿನಲ್ಲಿ

ನಾಗತಂಬಿಲ ಮತ್ತು ಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಡು ಕುಲವನ್ ಹಾಗೂ ಪರಿವಾರ ದೈವಗಳ ವರ್ಷಾವಧಿ ಪರ್ವ ಹಾಗೂ
ಶ್ರೀ ಪಂಜುರ್ಲಿ ದೈವದ ನೇಮೋತ್ಸವ ಶ್ರೀ ಕೊರತಿ, ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳಿಗೆ ಕೋಲ
ವನ್ನು- ಕಾರ್ಯಕ್ರಮದಲ್ಲಿ ಸೂಚಿಸಿದಂತೆ ಜರಗಿಸುವರೇ ಗುರುಹಿರಿಯರಿದ್ದು ನಿಶ್ಚಯಿಸಿರುತ್ತೇವೆ.

ಆ ಪ್ರಯುಕ್ತ ಕುಟುಂಬಸ್ಥರು ಹಾಗೂ ಊರ ಪರವೂರ ಭಕ್ತಾದಿಗಳು ಈ ವಾರ್ಷಿಕ ಪರ್ವಕ್ಕೆ ಆಗಮಿಸಿ, ಈ ಪುಣ್ಯ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿ ತ್ರಿಕರಣಪೂರ್ವಕವಾಗಿ ಸಹಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುವ,

ಆಚಾರಪಟ್ಟವರು, ಗುರಿಕಾರರು, ಪೂಜಾ ಕರ್ಮಿಗಳು ಹಾಗೂ ಆಡಳಿತ ಮಂಡಳಿಯ ಪರವಾಗಿ
ಗೌರವ ಅಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಧ್ಯಕ್ಷೆ ಹಾಗೂ ಸರ್ವ ಸದಸ್ಯೆಯರು ಮಹಿಳಾ ಸಂಘ

ತರವಾಡಿನ ಆಚಾರ ಪಟ್ಟವರು, ಗುರಿಕಾರರು, ಪೂಜಾಕರ್ಮಿಗಳು ಮತ್ತು ಸಹಕರ್ಮಿಗಳು

ಶ್ರೀ ತಿಮಿರಿ ಬೆಳ್ಳಪ್ಪಾಡ ತಮ್ಮ ದೈವದ ಪಾತ್ರಿ, ಅಪ್ಪು ಆತಾರ ದೊಡ್ಡ ಆತಾರರು, ಶ್ರೀ ಕ್ಷೇತ್ರ ಉದ್ಯಾವರ-ಮಾಡ, ಶ್ರೀ ಚೀರುಂಭ ಭಗವತೀ ಕ್ಷೇತ್ರ, ಉಳ್ಳಾಲ, ಶ್ರೀ ದೇಜಪ್ಪ ಆತಾರ್, ಎಳೆಯ ಆತಾರರು, ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ, ಶ್ರೀ ದಂಡ ಆತಾರ್, ಕನಿಲ ಶ್ರೀ ಭಗವತೀ ಕ್ಷೇತ್ರ, ಶ್ರೀ ಕಣ್ಣ ಕಲೇಕಾರ, ಕನಿಲ ಶ್ರೀ ಭಗವತೀ ಕ್ಷೇತ್ರ, ರಾಮ ಗುರಿಕಾರ ಚಟ್ಟೆಕಲ್ಲು ವಿದ್ರೋಳಿ ಶ್ರೀ ಭಗವತೀ ಕ್ಷೇತ್ರ, ಶ್ರೀ ನವೀನ ಗುರಿಕಾರ, ಕನಿಲ ಶ್ರೀ ಭಗವತೀ ಕ್ಷೇತ್ರ, ಶ್ರೀ ಮಾಧವ ಸುವರ್ಣ, ತರವಾಡು ಮೂಪನ್, ಶ್ರೀಮತಿ ಸುಂದರಿ ಕನಿಲ, ತರವಾಡು ಮೂಪತ್ತಿ, ಪೂಜಾಕರ್ಮಿಗಳು, ಶ್ರೀ ಯೋಗೇಶ್ ಬೆಳ್ಳಾಡೂರು (ತೊಂಡಚ್ಚನ್ ಕರ್ಮಿ), ಶ್ರೀ ಪೂವಪ್ಪ ವೈ.ಬಿ. ಇರಾ (ಪಂಜುರ್ಲಿ ಕರ್ಮಿ), ಶ್ರೀ ಸಂಜೀವ ಪೂಜಾರಿ, ಕೂಡೂರು (ಕಲ್ಲುರ್ಟಿ ಕರ್ಮಿ), ಶ್ರೀ ನಾರಾಯಣ, ಕಾಂತುಕೋಡಿ (ಗುಳಿಗ ಕರ್ಮಿ),

ಸಹಕರ್ಮಿಗಳು : ಶ್ರೀ ಕಿಶೋರ್ ಸಜಿಪ, ಶ್ರೀ ಅಭಿಷೇಕ್ ಸಜಿಪ, ಶ್ರೀ ದಿನೇಶ್ ಮಜಿಬೈಲು, ಶ್ರೀ ಹರೀಶ ಸಜಿಪ, ಶ್ರೀ ಚಂದ್ರಹಾಸ ತಲಪಾಡಿ, ಶ್ರೀ ದೇವದಾಸ್, ಶ್ರೀ ಚೋಮ ಬೆಳ್ಳಾಡ, ಸಜಿಪ, ಶ್ರೀಮತಿ ಶಶಿಕಲಾ ಕುಂಜತ್ತೂರು

ಕಾರ್ಯಕ್ರಮಗಳು

ತಾ. 01-02-2026 ಬೆಳಿಗ್ಗೆ ಗಂಟೆ 09.20ರಿಂದ 09.40ರ ಒಳಗೆ ಗೊನೆಮುಹೂರ್ತ

ತಾ. 07-02-2026 ಬೆಳಿಗ್ಗೆ ಗಂಟೆ 7.00ಕ್ಕೆ ಗಣಹೋಮ
ಬೆಳಿಗ್ಗೆ ಗಂಟೆ 11-00ಕ್ಕೆ ನಾಗತಂಬಿಲ
ಬೆಳಿಗ್ಗೆ ಗಂಟೆ 11.30ಕ್ಕೆ (ಸಜಿಪ ವೇದಮೂರ್ತಿ ಶ್ರೀ ವಿಷ್ಣು ಮಯ್ಯ ತಂತ್ರಿವರ್ಯರಿಂದ)
ಮಧ್ಯಾಹ್ನ ಗಂಟೆ 1-00ಕ್ಕೆ ಶ್ರೀ ವೆಂಕಟರಮಣ ದೇವರ ಮುಡಿಪು ಶುದ್ಧಿ
ರಾತ್ರಿ ಗಂಟೆ 7-00ಕ್ಕೆ : ಅನ್ನಸಂತರ್ಪಣೆ
ರಾತ್ರಿ ಗಂಟೆ 10-00ಕ್ಕೆ ವರ್ಷಾವಧಿ ಪರ್ವ
ರಾತ್ರಿ ಗಂಟೆ 11.00ಕ್ಕೆ ಅನ್ನಸಂತರ್ಪಣೆ
ರಾತ್ರಿ ಗಂಟೆ 12.00ಕ್ಕೆ ಶ್ರೀ ಕೊರತಿ ದೈವದ ಕೋಲ
ಶ್ರೀ ಪಂಜುರ್ಲಿ ದೈವದ ನೇಮೋತ್ಸವ ಹರಕೆ ಪ್ರಸಾದ ವಿತರಣೆ

ತಾ. 08-02-2026
ಬೆಳಿಗ್ಗೆ ಗಂಟೆ 5-00ಕ್ಕೆ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಕ್ಷೇತ್ರಪಾಲ ಗುಳಿಗ ದೈವದ ಕೋಲ
ಸಂಜೆ ಗಂಟೆ 6.00ಕ್ಕೆ ಶ್ರೀ ರಾಹುಗುಳಿಗ ದೈವಕ್ಕೆ ತಂಬಿಲ
ರಾತ್ರಿ ಗಂಟೆ 7.00ಕ್ಕೆ ಮರುಪುತ್ತರಿ
ತಾ. 10-02-2026
ರಾತ್ರಿ ಗಂಟೆ 7-00ಕ್ಕೆ ಹರಕೆ ನೇಮ

ಸೇವಾರ್ಥಿಗಳು : ಶ್ರೀಮತಿ ಚಂದ್ರಾವತಿ, ಪ್ರಶಾಂತ್ ನಿಲಯ, ಮಾರ್ಲ

Leave a Reply

Your email address will not be published. Required fields are marked *