www.gurufront.com

ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ ಶಿರಿಯ ಮಹಾಶಿವರಾತ್ರಿ ಉತ್ಸವ

ಭಗವದ್ಭಕ್ತ ಬಂಧುಗಳೇ

ಸ್ವಸ್ತಿ। ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ೩ ಮತ್ತು ೪ ಸಲುವ ತಾ. 15-02-2026ನೇ ಆದಿತ್ಯವಾರ ಮತ್ತು 16-02-2026ನೇ ಸೋಮವಾರ ಬ್ರಹ್ಮಶ್ರೀ ಬಡಾಜೆ ಬೀಡು ಗೋಪಾಲಕೃಷ್ಣ ತಂತ್ರಿಯವರ ಪೌರೋಹಿತ್ಯದಲ್ಲಿ ವರ್ಷಂಪ್ರತಿ ಜರಗುವ

ಮಹಾಶಿವರಾತ್ರಿ ಉತ್ಸವವು ಜರಗಲಿರುವುದು. ಭಕ್ತಾಭಿಮಾನಿಗಳಾದ ತಾವೆಲ್ಲರೂ ಬಂದು ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,

ಆಡಳಿತ ಮೊಕ್ತೇಸರರು – ಶ್ರೀ ಪ್ರಶಾಂತ್ ಕುಮಾರ್ ವಾನಂದೆ; ಮೊಕ್ತೇಸರರು – ಶ್ರೀ ಕೃಷ್ಣ ಶಿರಿಯ, ಶ್ರೀ ಶಶಿಧರ ಶೆಟ್ಟಿ ವಾನಂದೆ, ಶ್ರೀ ಸುರೇಶ್ ಮುಟ್ಟಂ, ಶ್ರೀ ಮಹೇಶ್ ವೀರನಗರ, ಕೋಶಾಧಿಕಾರಿ – ಶ್ರೀ ಪ್ರಶಾಂತ್ ಕುಮಾರ್ ವಾನಂದೆ, ಆಡಳಿತ ಮೊಕೇಸರರು, ಲೆಕ್ಕ ಪರಿಶೋಧಕರು – ಶ್ರೀ ಜಯರಾಮ ಶೆಟ್ಟಿ. ಕೆ, ಯುವವೇದಿಕೆ (ರಿ.) ಶಿರಿಯ, ಸೀರೆ ಶ್ರೀ ಶಂಕರನಾರಾಯಣ ಭಜನಾ ಸಂಘ, ಶಿರಿಯ, ಸೀರೆ ಶ್ರೀ ಶಂಕರನಾರಾಯಣ ಮಹಿಳಾ ಸಂಘ, ಶಿರಿಯ, ಅಡ್ಕತ್ತಾಯರು (ಕ್ಷೇತ್ರೇಶರರು) ಮತ್ತು ಅರ್ಚಕರು, ಅಧ್ಯಕ್ಷರು – ನಡಿಬೈಲು ಬೀಡು, ವಾನಂದೆ ಶ್ರೀ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷರುಗಳು – ಅಡ್ಕ ಹೊಸಮನೆ ಶ್ರೀ ಲಕ್ಷ್ಮಿನಾರಾಯಣ ಶೆಟ್ಟಿ, ಶ್ರೀ ರಘುರಾಮ ಆಳ್ವ, ಪ್ರಧಾನ ಕಾರ್ಯದರ್ಶಿ , ಶ್ರೀ ತಾರಾನಾಥ ಶೆಟ್ಟಿ ಕೆ, ಕಾರ್ಯದರ್ಶಿಗಳು, ಶ್ರೀ ಸತೀಶ್ಚಂದ್ರ ಶೆಟ್ಟಿ. ವಿ, ಶ್ರೀ ಶಂಕರ ಶಿರಿಯ, ಸದಸ್ಯರು, ಜೀರ್ಣೋದ್ಧಾರ ಸೇವಾ ಮತ್ತು ಆಡಳಿತ ಸಮಿತಿ

ಕಾರ್ಯಕ್ರಮಗಳು

ತಾ 13-02-2026 ನೇ ಶುಕ್ರವಾರ
ಸಂಜೆ 5.00 ಗಂಟೆಗೆ : ದುರ್ಗಾನಮಸ್ಕಾರ ಪೂಜೆ

ತಾ 15-02-2026ನೇ ಆದಿತ್ಯವಾರ
ಪೂರ್ವಾಹ್ನ ಘಂಟೆ 6.00ರಿಂದ : ದೀಪ ಪ್ರತಿಷ್ಠೆ
ಪೂರ್ವಾಹ್ನ ಘಂಟೆ 7.00ರಿಂದ : ನಿತ್ಯಪೂಜೆ, ಸಹಸ್ರ ಬಿಲ್ವಾರ್ಚನೆ
ಪೂರ್ವಾಹ್ನ ಘಂಟೆ 8.30ರಿಂದ : ಗಣಹೋಮ
ಪೂರ್ವಾಹ್ನ ಘಂಟೆ 9.30ರಿಂದ 11.30 ರ ತನಕ: ಭಜನೆ-ಶ್ರೀ ಚೀರುಂಭಾ ಭಗವತೀ ಮಹಿಳಾ ಭಜನಾ ಸಂಘ, ನಾರಾಯಣಮಂಗಲ, ನಾಯ್ಕಾಪು
ಪೂರ್ವಾಹ್ನ ಘಂಟೆ 10.30ರಿಂದ : ನವಕ ಕಲಶ ಮತ್ತು ಏಕಾದಶ ರುದ್ರಾಭಿಷೇಕ
ಪೂರ್ವಾಹ್ನ ಘಂಟೆ 10.30ರಿಂದ 11.30ರ ತನಕ : ಭಜನೆ- ಶ್ರೀ ಅಯ್ಯಪ್ಪ ಕುಣಿತ ಭಜನಾ ಸಂಘ ಅಶೋಕನಗರ, ಅಡ್ಕ
ಪೂರ್ವಾಹ್ನ ಘಂಟೆ 11ರಿಂದ : ನಾಗತಂಬಿಲ
ಪೂರ್ವಾಹ್ನ ಘಂಟೆ 11.30ರಿಂದ : ವೀರಭದ್ರ ತಂಬಿಲ
ಪೂರ್ವಾಹ್ನ ಘಂಟೆ 11.30ರಿಂದ ಜಾರ 12.30 ಭಜನೆ- ಶ್ರೀ ಭಗವತೀ ಮಹಿಳಾ ಭಜನಾ ಸಂಘ, ಪಾರೆಸ್ಥಾನ, ಆರಿಕ್ಕಾಡಿ
ಮಧ್ಯಾಹ್ನ ಘಂಟೆ 12ರಿಂದ : ಮಹಾಪೂಜೆ, ಪ್ರಸಾದ ವಿತರಣೆ, : ಪ್ರಸಾದ ಭೋಜನ

ತಾ 16-02-2026ನೇ ಸೋಮವಾರ
ಪೂರ್ವಾಹ್ನ ಘಂಟೆ 7.00ರಿಂದ : ನಿತ್ಯಪೂಜೆ
ಪೂರ್ವಾಹ್ನ ಘಂಟೆ 9.00 ರಿಂದ : ಶ್ರೀ ಭೂತ ಬಲಿ ಉತ್ಸವ, ರಾಜಾಂಗಣ ಪ್ರಸಾದ ವಿತರಣೆ
ಪೂರ್ವಾಹ್ನ ಘಂಟೆ 11.30ರಿಂದ : ತುಲಾಭಾರ
ಮಧ್ಯಾಹ್ನ ಘಂಟೆ 12.00ರಿಂದ : ಮಹಾಪೂಜೆ, ಪ್ರಸಾದ ವಿತರಣೆ, : ಪ್ರಸಾದ ಭೋಜನ
ಮಧ್ಯಾಹ್ನ ಘಂಟೆ 1.30ರಿಂದ 2.30ರ ತನಕ : ಭಜನೆ- ಶ್ರೀ ಹನುಮ ಭಕ್ತ ವೃಂದ ಮಹಿಳಾ ಭಜನಾ ಸಂಘ, ಆರಿಕ್ಕಾಡಿ
ಮಧ್ಯಾಹ್ನ ಘಂಟೆ 2.30ರಿಂದ 3.30ರ ತನಕ ಭಜನೆ- ಶ್ರೀ ನವದುರ್ಗಾ ಭಜನಾ ಸಂಘ, ಪುಳಿಕುತ್ತಿ
ಸಂಜೆ ಘಂಟೆ 3.30ರಿಂದ 4.30ರ ತನಕ : ಭಜನೆ -ಶ್ರೀ ಮಹಾವಿಷ್ಣು ಮಹಿಳಾ ಭಜನಾ ಸಂಘ ನಾರಾಯಣಮಂಗಲ
ಸಂಜೆ ಘಂಟೆ 4.00ರಿಂದ : ಸೀರಂಬಲತಾಯಿ ತಂಬಿಲ (ಮೂಲಸ್ಥಾನದಲ್ಲಿ)
ಸಂಜೆ ಘಂಟೆ 4.30ರಿಂದ : ಭಜನೆ-ಶ್ರೀ ಭಗವತೀ ಮಹಿಳಾ ಭಜನಾ ಸಂಘ, ಅಡ್ಕ 5.30ರ ತನಕ
ಸಂಜೆ ಘಂಟೆ5.30ರಿಂದ 6.30 : ಭಜನೆ- ಶ್ರೀ ವಿಶ್ವಕರ್ಮ ಬಳಗ ನಾಯ್ಕಾಪು
ಸಂಜೆ ಘಂಟೆ 6.30ಕ್ಕೆ : ರಾತ್ರಿ ನಿತ್ಯಪೂಜೆ
ಸಂಜೆ ಘಂಟೆ 6.45ರಿಂದ : ಸೀರಂಬಲತಾಯಿ ದೈವದ ಭಂಡಾರ ಹೊರಡುವುದು
ರಾತ್ರಿ ಘಂಟೆ 7.00ಕ್ಕೆ : ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆ (ರಿ) ಕಾಸರಗೋಡು ಇವರಿಂದ ಸಾಂಸ್ಕೃತಿಕ ಕಲಾ ವೈಭವ ಕಲಾವಿದರ ಕಲರವ
ರಾತ್ರಿ ಘಂಟೆ 9.00ಕ್ಕೆ : ಸೀರಂಬಲತಾಯಿ ದೈವದ ನೇಮ.

Leave a Reply

Your email address will not be published. Required fields are marked *