ಎಡನಾಡು-ಪೊಸದಟಿಕೆ ತರವಾಡು ಗೋಳಿಯಡ್ಕ; ತರವಾಡು ಗೃಹಪ್ರವೇಶ ಶ್ರೀದೈವಗಳ ಪ್ರತಿಷ್ಠೆ ಮತ್ತು ಕೋಲ
ಭಗವದ್ಭಕ್ತರೇ,
ಕುಂಬಳೆ ಸಮೀಪದ ಎಡನಾಡಿನಲ್ಲಿ ಸುಮಾರು 150 ವರ್ಷಗಳ ಹಿಂದೆ ಬಾಬೆ, ದೈಯ್ಯು, ಕೊರತಿ(ಕುಕ್ಕೆದಿ), ಐತ್ತ, ಕೊರಗ, ಚೋಮಾರು, ಅಂಗಾರ ಎಂಬ ಸಹೋದರ ಸಹೋದರಿಯರು ತಮ್ಮ ಹಿರಿಯರು ಪರಂಪರಾಗತವಾಗಿ ಆರಾಧಿಸುತ್ತಿದ್ದ ಬ್ರಹ್ಮನ ಬಂಟ ರಾಹು ಗುಳಿಗ, ಚೌಕಾರು ಗುಳಿಗ, ಕೊರತಿ, ಪಂಜುರ್ಲಿ, ಕಲ್ಲುರ್ಟಿ, ಪಿಲಿಚಾಮುಡಿ, ಕುಡುಮ ದೈವಗಳ ಆರಾಧನೆಯನ್ನು ಭಕ್ತಿ ನಿಷ್ಠೆಯಿಂದ ನಡೆಸುತ್ತಿದ್ದರು. ತದನಂತರ ಚೋಮಾರು ಎಂಬವರನ್ನು ನೆಲ್ಲಿಕುಂಜೆಗೂ ಕೊರತಿ ಎಂಬವರನ್ನು ಗೋಳಿಯಡ್ಕಕ್ಕೂ ವಿವಾಹ ಮಾಡಿಕೊಡಲಾಗಿತ್ತು. ಹಿರಿಯರಾದ ಕೊರತಿಯವರ ಮನೆಗೆ ಶ್ರೀದೈವಗಳ ಭಂಡಾರವನ್ನು ತರಲಾಯಿತು. ಅವರ ಮಕ್ಕಳಾದ ಮತ್ತ (ಮೋನ), ರಮೇಶ (ಮಾಯಿಲ), ಉಮೇಶ, ಕುಂಬೆ ನೆಹ್ರಾಜೆ, ಪೊಡಿ (ಬಳಕ್ಕುಳ), ಚೋಮಾರು (ಪುಂಡೂರು) ಅಂಗಾರೆ (ಇಸ್ಲಂಪಾಡಿ), ಕಲ್ಯಾಣಿ (ಮುಳಿಯಾರು) ಮೀನಾಕ್ಷಿ (ಕಜಂಪಾಡಿ), ಕೊರಪ್ಪಾಳು ಯಾನೆ ಕಮಲ (ಎಡನಾಡು) ಎಂಬವರ ನೇತೃತ್ವದಲ್ಲಿ ಕಾಲಕಾಲಕ್ಕೆ ನೇಮ, ತಂಬಿಲ ಸೇವೆಗಳು ನಡೆಯುತ್ತಿತ್ತು.
ಪ್ರಸ್ತುತ ಊರಿನಾದ್ಯಂತ ಚದುರಿ ನಿಂತ ಕುಟುಂಬವನ್ನು ಏಕಸೂತ್ರಕ್ಕೆ ತರುವುದಕ್ಕಾಗಿ ಮತ್ತು ಶ್ರೀ ದೈವಗಳಿಗೆ ವರ್ಷಾವಧಿ ಕೋಲ, ತಂಬಿಲ, ಕಲಶ ಸೇವೆಗಳನ್ನು ಸುಸೂತ್ರವಾಗಿ ಸಲ್ಲಿಸಿ ಕುಟುಂಬಕ್ಕೂ ನಾಡಿಗೂ ನೆಮ್ಮದಿ ಪ್ರಾಪ್ತವಾಗುವುದಕ್ಕೋಸ್ಕರ ತರವಾಡು ಮನೆಯ ಸಂಕಲ್ಪ ಮಾಡಿಕೊಂಡು ಕುಟುಂಬದ ಸರ್ವ ಸದಸ್ಯರ ದುಡಿಮೆಯಿಂದ ತರವಾಡು ಮನೆಯ ಎಲ್ಲಾ ಕೆಲಸ ಕಾರ್ಯಗಳು ಪೂರ್ತಿಗೊಂಡಿದೆ. ತರವಾಡಿನ ಗೃಹಪ್ರವೇಶ ನಡೆಸುವುದರೊಂದಿಗೆ ದೈವಗಳ ಪ್ರತಿಷ್ಠೆ ಮತ್ತು ದೈವಗಳ ಕೋಲವು ಇದೇ ಬರುವ 2026 ಎಪ್ರಿಲ್ 01 ಬುಧವಾರದಿಂದ ಎಪ್ರಿಲ್ 03 ಶುಕ್ರವಾರದವರೆಗೆ ವಿವಿಧ ಧಾರ್ಮಿಕ ಕ್ರಿಯೆಗಳೊಂದಿಗೆ ನಡೆಯಲಿದೆ.
ಭಗವದ್ಭಕ್ತರಾದ ತಾವೆಲ್ಲರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಕುಟುಂಬಸ್ಥರು ಎಡನಾಡು, ಪೊಸದಟಿಕೆ ತರವಾಡು, ಗೋಳಿಯಡ್ಕ

ಕಾರ್ಯಕ್ರಮ
2026, ಮಾರ್ಚ್ 26 ಗುರುವಾರ: ಬೆಳಗ್ಗೆ ಗಂಟೆ 8.30ಕ್ಕೆ : ಗೊನೆ ಕಡಿಯುವುದು
2026, ಎಪ್ರಿಲ್ 01 ಬುಧವಾರ: ರಾತ್ರಿ 8.00 ಗಂಟೆಗೆ : ಕುತ್ತಿಪೂಜೆ
2026 ಎಪ್ರಿಲ್ 02 ಗುರುವಾರ : 5.30 ಗಣಪತಿ ಹೋಮ
6.00 ಗಂಟೆ: ಗುರುಹಿರಿಯರಿಗೆ ಪ್ರಾರ್ಥನೆ
6.30ರಿಂದ 7.05ರ ಮಧ್ಯೆ ತರವಾಡು ಗೃಹಪ್ರವೇಶ
8.00 ಗಂಟೆ: ಶ್ರೀ ದೈವಗಳ ಭಂಡಾರ ಪ್ರತಿಷ್ಠೆ
9.00 ಗಂಟೆ: ಗೌರವಾರ್ಪಣೆ (ಕುಟುಂಬದ ಹಿರಿಯರಿಗೆ)
10.00 ಗಂಟೆ: ರಾಹುಗುಳಿಗನಿಗೆ ಬಡಿಸುವುದು.
11.00 ಕ್ಕೆ : ಗುಳಿಗ ಮತ್ತು ಕೊರತಿ ದೈವಗಳ ಕೋಲ
ಮಧ್ಯಾಹ್ನ 1ಕ್ಕೆ : ಅನ್ನದಾನ
ಸಾಯಂಕಾಲ 7ಕ್ಕೆ : ಭಂಡಾರ ಇಳಿಯುವುದು
ರಾತ್ರಿ 8 ಗಂಟೆಗೆ : ಅನ್ನದಾನ
ರಾತ್ರಿ 8.30ಕ್ಕೆ : ಶ್ರೀ ಪಂಜುರ್ಲಿ ದೈವದ ತೊಡಂಜಲ್
ರಾತ್ರಿ 9.00 ಗಂಟೆಗೆ : ಶ್ರೀ ಪಿಲಿಚಾಮುಡಿ ದೈವದ ತೊಡಂಜಲ್
2026, ಎಪ್ರಿಲ್ 03 ಶುಕ್ರವಾರ
ರಾತ್ರಿ 1.00 ಗಂಟೆಗೆ : ಶ್ರೀ ಕಲ್ಲುರ್ಟಿ ದೈವದ ಕೋಲ
ಪೂರ್ವಾಹ್ನ 4ಕ್ಕೆ : ಶ್ರೀ ಪಿಲಿಚಾಮುಡಿ ದೈವದ ಕೋಲ
ಪೂರ್ವಾಹ್ನ 5ಕ್ಕೆ : ಶ್ರೀ ದೈವಗಳ ಅರಶಿನ ಹುಡಿ ಪ್ರಸಾದ ವಿತರಣೆ
ಬೆಳಗ್ಗೆ 7.00ಕ್ಕೆ : ಶ್ರೀ ಕುಡುಮ ದೈವದ ತೊಡಂಜಲ್
ಬೆಳಗ್ಗೆ 8.00 ಗಂಟೆಗೆ : ಶ್ರೀ ಕುಡುಮ ದೈವದ ಕೋಲ .
11.30 ಗಂಟೆಗೆ : ಅರಶಿನ ಹುಡಿ ಪ್ರಸಾದ ವಿತರಣೆ
ಅಪರಾಹ್ನ 12.00 ಗಂಟೆಗೆ :ಭಂಡಾರ ಏರುವುದು
1.00 ಗಂಟೆಗೆ: ಅನ್ನದಾನ
ರಾತ್ರಿ 8.00 ಗಂಟೆಯಿಂದ : ಅಗಲಿದ ಕುಟುಂಬದ ಹಿರಿಯರಿಗೆ ಬಡಿಸುವುದು.