ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದ ವಾರ್ಷಿಕೋತ್ಸವದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಚ್ಚಾಬಾಡಿ ಪಾವೂರು ವಿಭಾಗದ ವತಿಯಿಂದ ಕ್ಷೇತ್ರಕ್ಕೆ ಅಕ್ಷಯ ಪಾತ್ರೆ (ಕೊಪ್ಪರಿಗೆ) ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಗುರಿಕಾರರಾದ ಪುರುಷೋತ್ತಮ ಗುರಿಕಾರ, ಪ್ರಸಾದ್ ಗುರಿಕಾರ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು, ಪಾವೂರು ವಿಭಾಗದ ಅಧ್ಯಕ್ಷ ಮನೋಜ್ ಕೊಪ್ಪಳ, ಜಯರಾಜ್ ಬಜಾಲ್, ಶಿವಕುಮಾರ್ ಬಳ್ಳೂರು, ಸುರೇಶ್ ಬೋಲ್ಯಾಂಗೋಡಿ, ದಿವಾಕರ ಚೌಕಿ, ಸುಧಾಮಣಿ ಅರಿಬೈಲ್, ಮಲ್ಲಿಕಾ ಬೇಕರಿ, ಸರಿತಾ ಕುಂಡಾಪು, ಲಲಿತಾ ತಾವುಡ್ಗೋಳಿ, ಚಿರಶ್ರೀ ಬೇಕರಿ, ಚಂದ್ರಾವತಿ ಬೋಲ್ಯಾಂಗೋಡಿ, ನಾರಾಯಣ ಕಳ್ಳಜೆ, ವಿನೋದ್ ವಳಚ್ಚಿಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಕ್ಷೇತ್ರದ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ತಮ್ಮ ಸಕ್ರಿಯ ಕೊಡುಗೆ ನೀಡುವುದಾಗಿ ತಿಳಿಸಿದರು.