www.gurufront.com

ಧಾರ್ಮಿಕ ಮುಂದಾಳು, ಸಮಾಜ ಸೇವಕ ಗೋಪಾಲ್ ಬಂದ್ಯೋಡು ಇನ್ನಿಲ್ಲ


ಶ್ರೀ ಭಗವತೀ ಕ್ಷೇತ್ರ ಅಡ್ಕ, ಬಂದ್ಯೋಡು ಇದರ ಮಾಜಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ಇವರು ನಿನ್ನೆ ರಾತ್ರಿ, ಮೇ ೧೨, ೨೦೨೬ರಂದು ದೈವಾಧೀನರಾದರು.


ಕೇರಳ ಸರಕಾರದ ನಿವೃತ್ತ ಉದ್ಯೋಗಿ, ನಂತರ ತನ್ನ ಜೀವನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಜೀವನದಲ್ಲಿ ಸಾರ್ಥಕರಾದರು. ಕಾಸರಗೋಡು ಜಿಲ್ಲೆಯ ಹಲವು ಕ್ಷೇತ್ರಗಳ ಬ್ರಹ್ಮಕಲಶದ ರೂವಾರಿಯಾಗಿ ಇವರ ಸೇವೆ ಸಂದಿದೆ.

ತೀಯಾ ಸಮಾಜ ಸಂಘಟನೆಯಲ್ಲಿ ಮಾಜಿ ಅಧ್ಯಕ್ಷರಾಗಿ ಸೇವೆ, ಭಗವತೀ ಕ್ಷೇತ್ರದ ಪುನರ್ ನಿರ್ಮಾಣ ಮತ್ತು ಅದರ ಬ್ರಹ್ಮಕಲಶೋತ್ಸವ ಎಲ್ಲಾ ಸಾಧನೆಯ ಹರಿಕಾರ ಇವರು. ತೀಯಾ ಸಮಾಜ ೧೮ ಕ್ಷೇತ್ರ ಮತ್ತು ಹಲವು ತರವಾಡುಗಳಲ್ಲಿ ಇವರ ಸೇವೆ ಸಂದಿದೆ.

Leave a Reply

Your email address will not be published. Required fields are marked *