Skip to main content

www.gurufront.com

ಹೆಣ್ಣು ಕಂದನ ಮೊದಲ ಅಳುವ ಕೇಳಿದಾಗ
ತಾಯಿಯ ಕಣ್ಣಲ್ಲಿ ಹೊಳೆಯಿತು ಆನಂದ ದೀಪ


ತಂದೆ ಮನದ ರಾಣಿಯಾಗಿ ನಡೆದಾಗ
ತವರೂರು ಹಾದಿಯೇ ಅರಮನೆಯಾಗುವುದು


ಹೆಣ್ಣು ನಡೆದಾಗ ಮೂಡಿದ ಗೆಜ್ಜೆ ನಾದ
ಮನೆಯೊಳಗೆಲ್ಲಾ ಗುಡಿಗಂಟೆಯ ನಿನಾದ


ಹೆಣ್ಣು ಮನೆದೇವರಿಗೆ ಹಚ್ಚಿದ ಧೂಪ ದೀಪ
ಮನೆ ಮನದಲ್ಲೆಲ್ಲಾ ಹತ್ತಿಹುದು ಹರ್ಷದೀಪ


ನೋವು ನಲಿವಿನಲ್ಲೂ ನಗುತ ಬಾಳುವ ಹೆಣ್ಣು
ಸಂಸಾರದ ಬಂಡಿಯ ಸರಿದೂಗಿಸಿ ನಡೆವ ಸಾರಥಿ


ನೂರಾರು ಪಾತ್ರವ ತಾ ಮಾಡಿ ದಣಿಯುವ ಹೆಣ್ಣು
ಮನೆಯೊಳಗೆ ಪ್ರತಿ ಜೀವಕ್ಕೂ ಈ ಹೆಣ್ಣೇ ಕಣ್ಣು


ಹುಟ್ಟಿದ ಮನೆಗೂ ಸೇರಿದ ಮನೆಗೂ ನಂದಾದೀಪ
ನಗುವಿನ ಹೊಳೆಯ ಹರಿಸಲು ಸಂತಸದ ತೋರಣ.

ಕಾಂಚನಾ ಮೌನೇಶ್ ✍️
ಪ್ರತಾಪ್ ನಗರ, ಸೋಂಕಾಲ್

Leave a Reply

Your email address will not be published. Required fields are marked *