Skip to main content

www.gurufront.com

ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ. ವಿಶೇಷ ಸಂಚಿಕೆ ಬಿಡುಗಡೆ

ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ. ವಿಶೇಷ ಸಂಚಿಕೆ ಬಿಡುಗಡೆ ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳೂರು ಪತ್ರಿಕಾ ಭವನದಲ್ಲಿ ಜುಲೈ 21ರಂದು ಮಂಗಳವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೂರು ಬಂಟರ ಸಂಘದ ಅಧ್ಯಕ್ಷರಾದ ಆನಂದ ಶೆಟ್ಟಿ ಅಡ್ಯಾರ್ ವಹಿಸಿದರು. ಯಾವುದೇ ಪತ್ರಿಕೆ ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮವಲ್ಲ ಅದು ಸಮಾಜದ ಧ್ವನಿ .ಸಂಸ್ಕೃತಿಯ ಪ್ರತಿಬಿಂಬ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯಾಗಿದೆ. ಕಳೆದ 13 ವರ್ಷಗಳಿಂದ […]

ಮಾಡೂರು ಭಗವತೀ ಕ್ಷೇತ್ರದ ಗೌರವ ಅಧ್ಯಕ್ಷರಾಗಿ ಮುಂಬಯಿಯ ಉದ್ಯಮಿ ಕುಮಾರ್ ಎನ್. ಬಂಗೇರ ಆಯ್ಕೆ

ಮಾಡೂರು ಭಗವತೀ ಕ್ಷೇತ್ರದ ಗೌರವ ಅಧ್ಯಕ್ಷರಾಗಿ ಮುಂಬಯಿಯ ಉದ್ಯಮಿ ಕುಮಾರ್ ಎನ್. ಬಂಗೇರ ಆಯ್ಕೆ ಮುಂಬಯಿ : ತೀಯಾ ಸಮುದಾಯದ ಮಾಡೂರು ಶ್ರೀ ಪಾಡಾಂಗರ ಭಗವತೀ ಕ್ಷೇತ್ರದ ಗೌರವ ಅಧ್ಯಕ್ಷ ಹಾಗೂ ಪ್ರಮುಖ ಟ್ರಸ್ಟಿ ಯಾಗಿ ಮುಂಬಯಿ, ಮಂಗಳೂರು ಹಾಗೂ ದುಬಾಯಿಯ ಉಧ್ಯಮಿ, ಕೆಲವು ವರ್ಷಗಳ ಹಿಂದೆ ತೀಯಾ ಸಮಾಜದಲ್ಲಿ ಇತಿಹಾಸ ನಿರ್ಮಿಸಿದ ಸುಮಾರು ಒಂದು ತಿಂಗಳು ವಿವಿದೆಡೆ ಜರಗಿದ ತೀಯಾ ಉತ್ಸವದ ರೂವಾರಿ ಕುಮಾರ್ ಎನ್. ಬಂಗೇರ ಆಯ್ಕೆಯಾಗಿದ್ದಾರೆ. ಶ್ರೀ ಕ್ಷೇತ್ರದ ಟ್ರಸ್ಟಿನ ನೂತನ ಆಡಳಿತ […]

ಶ್ರೀ ಗುರು ಚರಣಾಮೃತ ಕೃತಿ ಬಿಡುಗಡೆ

ಶ್ರೀ ಗುರು ಚರಣಾಮೃತ ಕೃತಿ ಬಿಡುಗಡೆ ಕಡಲ ಸೃಷ್ಟಿ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿರುವ ಸಂಜೀವ ಕೆ ಅವರು ಬರೆದಿರುವ ಶ್ರೀ ಗುರು ಚರಣಾಮೃತ ಹಾಗೂ ತೀಯಾ ಕುಲ ತಿಲಕ ಮಹಾದಾನಿ ರೋಹಿದಾಸ್ ಬಂಗೇರ ಅವರ ವ್ಯಕ್ತಿ ಪರಿಚಯ ಕೃತಿಯು ಮಂಗಳೂರಿನ ಪತ್ರಿಕಾ ಭವನದಲ್ಲಿ ಇಂದು ಬಿಡುಗಡೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯ ಅಧ್ಯಕ್ಷರಾದ. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿದರು. ಮುಂಬೈಯ ಸಮಾಜಸೇವಕ ಶಂಕರ ಸುವರ್ಣ, ಉದ್ಯಮಿ ಗೋವಿಂದ ಮಂಜೇಶ್ವರ, ಅಮೃತ […]

ಗ್ರಾಮ ಉದ್ದಾರವಾದರೆ ನಗರ ಅಭಿವೃದ್ಧಿ; ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ಸಮಾಲೋಚನೆ ಸಭೆಯಲ್ಲಿ ಒಡಿಯೂರು ಶ್ರೀ

ಗ್ರಾಮ ಉದ್ದಾರವಾದರೆ ನಗರ ಅಭಿವೃದ್ಧಿ; ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ಸಮಾಲೋಚನೆ ಸಭೆಯಲ್ಲಿ ಒಡಿಯೂರು ಶ್ರೀ ರಾಷ್ಟೋತ್ಥಾನಕ್ಕೆ ರಾಷ್ಟ್ರದ ಸೇವೆ ಮಾಡುವುದು ಅಗತ್ಯ. ರಾಮನ ಸೇವಕನಾಗಿ ಹನುಮಂತ ಮಾಡಿದ ಸೇವೆಯನ್ನು ಮುಂದಿಟ್ಟುಕೊಂಡು ರಾಮರಾಜ್ಯಕ್ಕೆ ಪ್ರಯತ್ನಿಸಬೇಕು. ರಾಮ ರಾಜ್ಯ ಗ್ರಾಮಸ್ವರಾಜ್ಯದಿಂದ ದೇಶ ಸುಭಿಕ್ಷವಾಗುತ್ತದೆ.– ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನಗರದ ಬೇರು ಹಳ್ಳಿಯಲ್ಲಿದೆ. ಗ್ರಾಮಗಳ ಉದ್ಧಾರ ಆದರೆ ನಗರದಲ್ಲಿ ಕೂಡ ಅಭಿವೃದ್ಧಿ ಆಗುತ್ತದೆ. ಗ್ರಾಮೋತ್ಸವ ಮೂಲಕ ಸೇವಾ ಕಾರ್ಯ ಮಾಡಿದಾಗ ಸಂತೃಪ್ತಿ ಸಿಗುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ […]

ತಾಕೊಡೆ ಎಂಬ ತಾಕತ್ತು

ತಾರೀಖು 2023ರ ಸೆಪ್ಟೆಂಬರ್ 30; ಅಂದು ನಿಡಿದಾದ ಒಂದು ನಿಟ್ಟುಸಿರು ವೇದಿಕೆಯಿಂದ ನೇರವಾಗಿ ನನ್ನ ಕಿವಿಗಪ್ಪಳಿಸಿತ್ತು. ವೇದಿಕೆ: ಮುಂಬಯಿ ವಿಶ್ವವಿದ್ಯಾಲಯದ ಕುಸುಮಾಗ್ರಜ ಸಭಾಗೃಹ ತುಂಬಿ ತುಳುಕಿ ಹೊರಗೂ ಅಷ್ಟೇ ಜನಸಾಗರ ನೆರೆದಿತ್ತು. ಅಂದಿನ ನ ಭೂತೋ.. ಸೀನು ಸೀನರಿಗೆ ನಾನು ನೇರವಾಗಿ ಬೊಟ್ಟು ಮಾಡುವುದಿದ್ದರೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್. ಉಪಾಧ್ಯ ಅವರನ್ನೇ. ಅವರ ವಿದ್ಯಾರ್ಥಿಯಾಗಿರುವ ಅನಿತಾರ ಪಿಎಚ್.ಡಿ ಕೋರ್ಸ್ ವರ್ಕ್‌ ಸಲುವಾಗಿ ಜಯ ಸುವರ್ಣ ಅವರ ಸಮಗ್ರ ಜೀವನ ಕಥನ ಬರೆಯಲು ಆದೇಶಿಸದೆ […]

ಮನೆ ಬೆಳಗುವ ದೀಪ

ಹೆಣ್ಣು ಕಂದನ ಮೊದಲ ಅಳುವ ಕೇಳಿದಾಗತಾಯಿಯ ಕಣ್ಣಲ್ಲಿ ಹೊಳೆಯಿತು ಆನಂದ ದೀಪ ತಂದೆ ಮನದ ರಾಣಿಯಾಗಿ ನಡೆದಾಗತವರೂರು ಹಾದಿಯೇ ಅರಮನೆಯಾಗುವುದು ಹೆಣ್ಣು ನಡೆದಾಗ ಮೂಡಿದ ಗೆಜ್ಜೆ ನಾದಮನೆಯೊಳಗೆಲ್ಲಾ ಗುಡಿಗಂಟೆಯ ನಿನಾದ ಹೆಣ್ಣು ಮನೆದೇವರಿಗೆ ಹಚ್ಚಿದ ಧೂಪ ದೀಪಮನೆ ಮನದಲ್ಲೆಲ್ಲಾ ಹತ್ತಿಹುದು ಹರ್ಷದೀಪ ನೋವು ನಲಿವಿನಲ್ಲೂ ನಗುತ ಬಾಳುವ ಹೆಣ್ಣುಸಂಸಾರದ ಬಂಡಿಯ ಸರಿದೂಗಿಸಿ ನಡೆವ ಸಾರಥಿ ನೂರಾರು ಪಾತ್ರವ ತಾ ಮಾಡಿ ದಣಿಯುವ ಹೆಣ್ಣುಮನೆಯೊಳಗೆ ಪ್ರತಿ ಜೀವಕ್ಕೂ ಈ ಹೆಣ್ಣೇ ಕಣ್ಣು ಹುಟ್ಟಿದ ಮನೆಗೂ ಸೇರಿದ ಮನೆಗೂ ನಂದಾದೀಪನಗುವಿನ […]

ಭಾರತ್ ಬ್ಯಾಂಕ್‌ಗೆ ಪ್ರತಿಷ್ಠಿತ ‘ಲೀಡಿಂಗ್ ಬ್ಯಾಂಕ್ ಅವಾರ್ಡ್’

ಪುಣೆ: ಭಾರತ್ ಬ್ಯಾಂಕ್ ಸತತವಾಗಿ ತನ್ನ ಉತ್ತಮ ಕಾರ್ಯಕ್ಷಮತೆಯ ಮೂಲಕ ಗುರುತಿಸಿಕೊಂಡಿದೆ. ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಬ್ಯಾಂಕ್‌ಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” ಪ್ರದಾನ ಮಾಡಿ ಗೌರವಿಸಲಾಗಿದೆ. ಕ್ರೆಸ್ಟ್ ಇನ್ಫೋಮೀಡಿಯಾದ ಸಂಸ್ಥಾಪಕ ಶ್ರೀ ಗೌತಮ್ ನವೀನ್ ಅವರು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಶ್ರೀ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ […]

ಧಾರ್ಮಿಕ ಮುಂದಾಳು, ಸಮಾಜ ಸೇವಕ ಗೋಪಾಲ್ ಬಂದ್ಯೋಡು ಇನ್ನಿಲ್ಲ

ಧಾರ್ಮಿಕ ಮುಂದಾಳು, ಸಮಾಜ ಸೇವಕ ಗೋಪಾಲ್ ಬಂದ್ಯೋಡು ಇನ್ನಿಲ್ಲ ಶ್ರೀ ಭಗವತೀ ಕ್ಷೇತ್ರ ಅಡ್ಕ, ಬಂದ್ಯೋಡು ಇದರ ಮಾಜಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ಇವರು ನಿನ್ನೆ ರಾತ್ರಿ, ಮೇ ೧೨, ೨೦೨೬ರಂದು ದೈವಾಧೀನರಾದರು. ಕೇರಳ ಸರಕಾರದ ನಿವೃತ್ತ ಉದ್ಯೋಗಿ, ನಂತರ ತನ್ನ ಜೀವನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಜೀವನದಲ್ಲಿ ಸಾರ್ಥಕರಾದರು. ಕಾಸರಗೋಡು ಜಿಲ್ಲೆಯ ಹಲವು ಕ್ಷೇತ್ರಗಳ ಬ್ರಹ್ಮಕಲಶದ ರೂವಾರಿಯಾಗಿ ಇವರ ಸೇವೆ ಸಂದಿದೆ. ತೀಯಾ ಸಮಾಜ ಸಂಘಟನೆಯಲ್ಲಿ ಮಾಜಿ ಅಧ್ಯಕ್ಷರಾಗಿ ಸೇವೆ, ಭಗವತೀ ಕ್ಷೇತ್ರದ ಪುನರ್ ನಿರ್ಮಾಣ […]

ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ಅಕ್ಷಯ ಪಾತ್ರೆ ಸಮರ್ಪಣೆ

ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದ ವಾರ್ಷಿಕೋತ್ಸವದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಚ್ಚಾಬಾಡಿ ಪಾವೂರು ವಿಭಾಗದ ವತಿಯಿಂದ ಕ್ಷೇತ್ರಕ್ಕೆ ಅಕ್ಷಯ ಪಾತ್ರೆ (ಕೊಪ್ಪರಿಗೆ) ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಗುರಿಕಾರರಾದ ಪುರುಷೋತ್ತಮ ಗುರಿಕಾರ, ಪ್ರಸಾದ್ ಗುರಿಕಾರ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು, ಪಾವೂರು ವಿಭಾಗದ ಅಧ್ಯಕ್ಷ ಮನೋಜ್ ಕೊಪ್ಪಳ, ಜಯರಾಜ್ ಬಜಾಲ್, ಶಿವಕುಮಾರ್ ಬಳ್ಳೂರು, ಸುರೇಶ್ ಬೋಲ್ಯಾಂಗೋಡಿ, ದಿವಾಕರ ಚೌಕಿ, ಸುಧಾಮಣಿ ಅರಿಬೈಲ್, ಮಲ್ಲಿಕಾ ಬೇಕರಿ, ಸರಿತಾ ಕುಂಡಾಪು, ಲಲಿತಾ ತಾವುಡ್ಗೋಳಿ, ಚಿರಶ್ರೀ ಬೇಕರಿ, […]

CBSC, 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕುಮಾರಿ ಅನೋಖಿ ಆರ್ ಮಂಜೇಶ್ವರ ಅವರಿಗೆ ಅಭಿನಂದನೆಗಳು

CBSC, 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 67.6% ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ ಕುಮಾರಿ ಅನೋಖಿ ಆರ್ ಮಂಜೇಶ್ವರ ಅವರಿಗೆ ಅಭಿನಂದನೆಗಳು. ಅವರು ಓಮನ್‌ನ ಮಸ್ಕತ್‌ನ ಇಂಡಿಯನ್ ಶಾಲೆ ಯ ಹೆಮ್ಮೆಯ ವಿದ್ಯಾರ್ಥಿನಿ. ಮಂಜೇಶ್ವರದ ಶ್ರೀ ರೋಹಿದಾಸ್ ಮತ್ತು ಶ್ರೀಮತಿ ಅಶ್ವಿನಿ ರೋಹಿದಾಸ್ ಅವರ ಮುದ್ದಾದ ಹಿರಿಯ ಮಗಳು.ಮುಂಬಯಿ ತೀಯ ಸಮಾಜ ಅಧ್ಯಕ್ಷ ಶ್ರೀ ಕೃಷ್ಣ ಎನ್ ಉಚ್ಚಿಲ ಅವರ ಮೊಮ್ಮಗಳು. ಅವರು ನಮ್ಮ ಸಮುದಾಯಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ.ಅವರ ಯಶಸ್ಸು ಸಮರ್ಪಣೆ […]